ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರವೇ 2 ತಿಂಗಳ ವೃದ್ಧಾಪ್ಯ ವೇತನ: ಕಂದಾಯ ಇಲಾಖೆ ಸಿದ್ಧತೆ

Last Updated 2 ಏಪ್ರಿಲ್ 2020, 20:21 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ಹರಡುವಿಕೆಯಿಂದಾಗ ಆರ್ಥಿಕ, ವ್ಯವಹಾರ ಚಟುವಟಿಕೆಗಳು ನಿಂತಿದ್ದು, ಬಡವರ ಬದುಕಿಗೆ ನೆರವಾಗುವ ಕಾರಣಕ್ಕೆ ಈ ವಾರದಲ್ಲೇ ಎರಡು ತಿಂಗಳ ಸಾಮಾಜಿಕ ಭದ್ರತಾ ಪಿಂಚಣಿ ಸಂದಾಯ ಮಾಡಲು ಕಂದಾಯ ಇಲಾಖೆ ಮುಂದಾಗಿದೆ.

2019–20ನೇ ಸಾಲಿನಲ್ಲಿ ಖರ್ಚಾಗದೆ ಉಳಿದ ₹ 595 ಕೋಟಿಯನ್ನು ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲ ಹಾಗೂ ವಿಧವಾ ವೇತನ ಫಲಾನುಭವಿಗಳಿಗೆ ಮಾರ್ಚ್‌ ಮತ್ತು ಏಪ್ರಿಲ್ ತಿಂಗಳ ಪಿಂಚಣಿ ರೂಪದಲ್ಲಿ ನೀಡಲಾಗುವುದು. ಉಳಿದ ಎಲ್ಲಾ ಫಲಾನುಭವಿಗಳಿಗೆ 2ನೇ ಹಂತದಲ್ಲಿ 2020–21ನೇ ಸಾಲಿನಲ್ಲಿ ಒದಗಿಸಲಾಗುವ ಅನುದಾನದಲ್ಲಿ ‍ಎರಡು ತಿಂಗಳ ಪಿಂಚಣಿ ನೀಡಲಾಗುವುದು. ಈ ಸೂಚನೆಯಂತೆ ಜಿಲ್ಲಾ ಖಜಾನೆಯಿಂದ ಪಿಂಚಣಿ ದೊರೆಯಲಿದೆ ಎಂದು ತಿಳಿಸಲಾಗಿದೆ.

ಆರೋಗ್ಯ ಇಲಾಖೆ ನೌಕರರ ವಯೋನಿವೃತ್ತಿ ಮುಂದೂಡಿಕೆ
ಬೆಂಗಳೂರು: ಕೋವಿಡ್‌–19 ತುರ್ತು ಪರಿಸ್ಥಿತಿ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯುವಯೋನಿವೃತ್ತಿ ಹೊಂದುವ ತನ್ನವೈದ್ಯಕೀಯ, ಅರೆ ವೈದ್ಯಕೀಯ, ಕ್ಲಿನಿಕಲ್ ಹಾಗೂ ನಾನ್ ಕ್ಲಿನಿಕಲ್ ಸಿಬ್ಬಂದಿಯ ಸೇವೆಯನ್ನು ಜೂನ್‌.30ರ ವರೆಗೆ ವಿಸ್ತರಿಸಿದೆ.‌

ಮಾ.31ರಂದು ವಯೋನಿವೃತ್ತಿ ಹೊಂದಿದವರ ಸೇವಾ ಅವಧಿಯನ್ನು ಮೂರು ತಿಂಗಳಿಗೆ ಹಾಗೂ ಏಪ್ರಿಲ್ ತಿಂಗಳಲ್ಲಿ ನಿವೃತ್ತಿ ಹೊಂದುವವರ ಸೇವಾ ಅವಧಿಯನ್ನು ಎರಡು ತಿಂಗಳಿಗೆ ವಿಸ್ತರಿಸಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಅಧಿಸೂಚನೆ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT