ದೊರೆಸ್ವಾಮಿಗೆ ಬಸವ, ಷ.ಶೆಟ್ಟರ್‌ಗೆ ಪಂಪ ಪ್ರಶಸ್ತಿ

ಭಾನುವಾರ, ಜೂಲೈ 21, 2019
27 °C

ದೊರೆಸ್ವಾಮಿಗೆ ಬಸವ, ಷ.ಶೆಟ್ಟರ್‌ಗೆ ಪಂಪ ಪ್ರಶಸ್ತಿ

Published:
Updated:

ಬೆಂಗಳೂರು: 2018ನೇ ಸಾಲಿನ ರಾಷ್ಟ್ರೀಯ ಬಸವ ಪುರಸ್ಕಾರಕ್ಕೆ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್.ದೊರೆಸ್ವಾಮಿ ಹಾಗೂ ಪಂಪ ಪ್ರಶಸ್ತಿಗೆ ಹಿರಿಯ ಸಂಶೋಧಕ ಪ್ರೊ.ಷ.ಶೆಟ್ಟರ್‌ ಆಯ್ಕೆಯಾಗಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನೀಡಲಾಗುವ 3 ರಾಷ್ಟ್ರೀಯ ಪ್ರಶಸ್ತಿ ಮತ್ತು 14 ರಾಜ್ಯ ಪ್ರಶಸ್ತಿಗಳನ್ನು ಸಚಿವ ಡಿ.ಕೆ.ಶಿವಕುಮಾರ್‌ ಗುರುವಾರ ಪ್ರಕಟಿಸಿದ್ದಾರೆ. ರಾಷ್ಟ್ರೀಯ ಪ್ರಶಸ್ತಿಗಳು ತಲಾ ₹ 10 ಲಕ್ಷ, ರಾಜ್ಯ ಪ್ರಶಸ್ತಿಗಳು ತಲಾ ₹ 5 ಲಕ್ಷ ನಗದು ಒಳಗೊಂಡಿವೆ.

ರಾಷ್ಟ್ರ ಪ್ರಶಸ್ತಿ: ಟಿ.ಚೌಡಯ್ಯ ಪ್ರಶಸ್ತಿಗೆ ಹಿರಿಯ ಕಲಾವಿದ ಟಿ.ಎನ್.ಕೃಷ್ಣನ್‌ ಹಾಗೂ ಭಗವಾನ್‌ ಮಹಾವೀರ ಶಾಂತಿ ಪ್ರಶಸ್ತಿಗೆ ಸಮಾಜ ಸೇವಕಿ ಚನ್ನಮ್ಮ ಹಳ್ಳಿಕೇರಿ ಆಯ್ಕೆಯಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !