ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಲ ನಿರೋಧಕ ಕಾಗದದ ಕೈಚೀಲ!

ಸುಧಾರಿತ ಚೀಲ ಅಭಿವೃದ್ಧಿಪಡಿಸಿದ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ
Last Updated 8 ಜನವರಿ 2020, 20:06 IST
ಅಕ್ಷರ ಗಾತ್ರ

ಕಾರವಾರ: ನೀರಿನಂಶ ಇರುವ ಮೀನು, ಹಾಲು, ತರಕಾರಿ ಪದಾರ್ಥಗಳನ್ನು ಕೊಂಡೊಯ್ಯಲು ಕಾಗದದ ಕೈಚೀಲ ಸೂಕ್ತವಲ್ಲ ಎಂಬುದು ಸಾಮಾನ್ಯವಾದ ಅನಿಸಿಕೆ.ಈ ಸಮಸ್ಯೆಯನ್ನು ದೂರ ಮಾಡಲು ಸುಧಾರಿತ ಕಾಗದದ ಚೀಲವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಧನಂಜಯ ಹೆಗಡೆ ಅಭಿವೃದ್ಧಿಪಡಿಸಿದ್ದಾರೆ.

‘ಬಟ್ಟೆಗೆ ಹೊಲಿಗೆ ಹಾಕಲು ಬಳಸುವ ನೂಲನ್ನು ದಿನಪತ್ರಿಕೆಯ ಹಾಳೆಗಳನಡುವೆ ಇರಿಸಿ, ಅವುಗಳನ್ನು ಮೆಕ್ಕೆಜೋಳದ ಹಿಟ್ಟಿನಿಂದ ಮಾಡಿದ ಅಂಟಿನಲ್ಲಿ ಜೋಡಿಸಬೇಕು. ದಿನಪತ್ರಿಕೆಗಳಿಗೆಬಳಸುವ ಕಾಗದಕ್ಕೆ ನೀರನ್ನು ಹೀರಿಕೊಳ್ಳುವ ಗುಣ (ಪೋರಸ್) ಹೆಚ್ಚಿರುತ್ತದೆ. ಹಾಗಾಗಿ ಅಂಟನ್ನು ಬೇಗ ಹೀರಿ ನೂಲನ್ನು ಭದ್ರವಾಗಿ ಹಿಡಿದುಕೊಳ್ಳುತ್ತದೆ. ಮೆಕ್ಕೆಜೋಳದ ಅಂಟು ಒಣಗಿದ ಬಳಿಕ ಅದು ನೀರನ್ನು ಹೀರಿಕೊಳ್ಳುವುದಿಲ್ಲ.ಆಗ ಚೀಲವು ಜಲ ನಿರೋಧಕವಾಗುತ್ತದೆ.ಬಳಿಕ ನಮ್ಮ ಕಲ್ಪನೆಯ ವಿನ್ಯಾಸದಲ್ಲಿ ಚೀಲತಯಾರಿಸಿದರಾಯಿತು. ನಾನು ಮೂರು ತಿಂಗಳಿನಿಂದ ಒಂದೇ ಚೀಲವನ್ನು ಬಳಕೆ ಮಾಡುತ್ತಿದ್ದೇನೆ’ ಎಂದು ಅವರು ವಿವರಿಸಿದರು.

‘ಐದು ಕೆ.ಜಿ ತೂಕ ಹೊರುವ ಸಾಮರ್ಥ್ಯದ ಚೀಲಕ್ಕೆ 92 ರೋಲ್‌ ಹೊಲಿಗೆ ನೂಲನ್ನು ಬಳಸಿದ್ದೇನೆ. ಇದರಿಂದ ಚೀಲ ಗಟ್ಟಿಮುಟ್ಟಾಗಿದೆ. ಇದಕ್ಕೆಯಂತ್ರವನ್ನೂನಾನೇ ಕಂಡುಹಿಡಿದಿದ್ದೇನೆ. ಸದ್ಯಕ್ಕೆ ಎಲ್ಲವನ್ನೂಕೈಯಿಂದಲೇ ಮಾಡಲಾಗುತ್ತಿದ್ದು, ಸ್ವಯಂ ಚಾಲಿತ ಯಂತ್ರವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ‌’ ಎಂದರು.

‘ಮೆಕ್ಕೆಜೋಳದ ಅಂಟನ್ನು ಮಾತ್ರ ಬಳಸಿದರೆ ಚೀಲ ಗಡಸಾಗುತ್ತದೆ. ಅದನ್ನು ತಡೆಯಲು ಮಳೆ ಮರದ (ರೈನ್ ಟ್ರೀ) ಕಾಯಿಯ ಪುಡಿಯನ್ನುಅಂಟಿಗೆಮಿಶ್ರಣ ಮಾಡಿದೆ. ಇದರಿಂದ ಚೀಲ ಮೆದುವಾಗಿದೆ’ ಎಂದು ತಿಳಿಸಿದರು.

ಸಂಪೂರ್ಣ ಪರಿಸರ ಸ್ನೇಹಿ:ಈ ಚೀಲಗಳನ್ನು ತಯಾರಿಸಲು ಬಳಸುವ ಕಚ್ಚಾ ಸಾಮಗ್ರಿ ಸಂಪೂರ್ಣ ಪರಿಸರ ಸ್ನೇಹಿಯಾಗಿವೆ. ಒಂದು ವೇಳೆ ಎಲ್ಲೆಂದರಲ್ಲಿ ಎಸೆದರೂ ಕೊಳೆತು ಮಣ್ಣು ಸೇರುತ್ತದೆ. ಜಾನುವಾರು ಸೇವಿಸಿದರೂ ಸಮಸ್ಯೆಯಿಲ್ಲ. ಎಲ್ಲ ರೀತಿಯ ಸಾಮಗ್ರಿ ಕೊಂಡೊಯ್ಯಲೂ ಬಳಸುವಂತಿದೆ. ಜೊತೆಗೇದಿನಪತ್ರಿಕೆಗಳ ಸೂಕ್ತ ವಿಲೇವಾರಿ, ಮೆಕ್ಕೆಜೋಳ ಬೆಳೆಗೆ ಮತ್ತಷ್ಟು ಮಾರುಕಟ್ಟೆ, ಸ್ವಸಹಾಯ ಗುಂಪುಗಳಿಗೆ ಅಥವಾ ನವೋದ್ಯಮಿಗಳಿಗೆ ಉದ್ಯೋಗಾವಕಾಶ ಸಿಗುತ್ತದೆ ಎನ್ನುತ್ತಾರೆ ಧನಂಜಯ ಹೆಗಡೆ.

ಖರ್ಚು ಕೇವಲ 70 ಪೈಸೆ!

‘ಪ್ಲಾಸ್ಟಿಕ್ ನಿಷೇಧದ ಬಳಿಕ ಬಟ್ಟೆ ಚೀಲವೆಂದು ‘ನಾನ್ ವೂವನ್’ (ಬಟ್ಟೆಯಂತೆ ಕಾಣುವ, ಪ್ಲಾಸ್ಟಿಕ್ ಉತ್ಪನ್ನದಿಂದ ತಯಾರಿಸಿದ) ಚೀಲಗಳನ್ನು ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಅವು ಕೂಡ ಪರಿಸರಕ್ಕೆ ಮಾರಕ. ₹3ರಿಂದ ₹20ರವರೆಗೂ ಅವುಗಳಿಗೆ ದರವಿದೆ. ಆದರೆ, ನಾನು ಅಭಿವೃದ್ಧಿ ಮಾಡಿದ ಒಂದು ಕಾಗದದ ಚೀಲಕ್ಕೆ ಕಾರ್ಮಿಕರ ವೆಚ್ಚವೂ ಸೇರಿ ಗರಿಷ್ಠ 70 ಪೈಸೆ ಸಾಕು. ಚೀಲ ತಯಾರಿಸುವ ಯಂತ್ರಕ್ಕೆ ಸುಮಾರು ₹50 ಸಾವಿರಖರ್ಚಾಗುತ್ತದೆ’ ಎಂದು ಧನಂಜಯ ಹೆಗಡೆ ತಿಳಿಸಿದರು.

ಆಸಕ್ತರು ಮಾಹಿತಿಗೆ ಮೊಬೈಲ್: 94813 72678.

***

ಕಾಗದದಿಂದ ಚೀಲಗಳನ್ನು ತಯಾರಿಸುವ ಬಗ್ಗೆ ಉತ್ತರ ಕನ್ನಡದ ಆರು ಸ್ವಸಹಾಯ ಗಂಪುಗಳಿಗೆ ತರಬೇತಿ ನೀಡಲಾಗಿದೆ. ಇದು ಸ್ವ ಉದ್ಯೋಗಕ್ಕೂ ಅನುಕೂಲವಾಗಿದೆ.
–ಧನಂಜಯ ಹೆಗಡೆ,ಜಂಟಿ ನಿರ್ದೇಶಕ, ಜಿಲ್ಲಾ ಕೈಗಾರಿಕಾ ಕೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT