ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಷನ್‌ ಎಂದರೆ ತಲೆ ಬೋಳಿಸುವುದು– ಚಂಪಾ ವ್ಯಂಗ್ಯ

Last Updated 2 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ದಾವಣಗೆರೆ: ‘ರಾಜ್ಯದಲ್ಲಿ ಈಗ ಕಮಿಷನ್ ಹಾಗೂ ಮಿಷನ್‌ಗಳ ಕುರಿತು ಚರ್ಚೆ ನಡೆಯುತ್ತಿದೆ. ಆದರೆ, ನಮ್ಮ ಕಡೆ ಮಿಷನ್‌ ಎಂದರೆ ತಲೆ ಬೋಳಿಸುವುದು ಎಂದರ್ಥ’ ಎಂದು ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಲೇವಡಿ ಮಾಡಿದರು.

ನಗರದ ಶಿವಯೋಗಾಶ್ರಮದ ಬಸವ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 61ನೇ ಸ್ಮರಣೋತ್ಸವದಲ್ಲಿ ಶುಕ್ರವಾರ ಚಿಂತನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿರುವುದು 10 ಪರ್ಸೆಂಟ್‌ ಸರ್ಕಾರ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಕೇಂದ್ರದಲ್ಲಿರುವುದು 90 ಪರ್ಸೆಂಟ್‌ ಸರ್ಕಾರ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಎರಡೂ ಸೇರಿದರೆ 100 ಪರ್ಸೆಂಟ್‌. ಇದೆಲ್ಲವೂ ಜನರ ಹಣ’ ಎಂದು ಹೇಳಿದರು.

‘ಮೋದಿ ಅವರು ಯೋಗದಿಂದ ವಿಶ್ವದಲ್ಲಿ ಕ್ರಾಂತಿ ಮಾಡಿದ್ದಾರೆ ಎಂದು ಕೆಲವರು ಹೇಳುತ್ತಾರೆ. ಯೋಗದಿಂದ ಇಷ್ಟೆಲ್ಲಾ ಕ್ರಾಂತಿ ಮಾಡುವ ಮೋದಿ ಕರ್ನಾಟಕದ ಸಣ್ಣ ಚುನಾವಣೆಗೆ ಪದೇ ಪದೇ ಏಕೆ ಬರುತ್ತಾರೆ? ಅಲ್ಲಿಂದಲೇ ಪವಾಡ ಮಾಡಬಹುದಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT