ಪಾಪುಗೆ ಅ.ನ.ಕೃ ಪ್ರಶಸ್ತಿ ಪ್ರದಾನ

7

ಪಾಪುಗೆ ಅ.ನ.ಕೃ ಪ್ರಶಸ್ತಿ ಪ್ರದಾನ

Published:
Updated:
Deccan Herald

ಧಾರವಾಡ: ‘ಉತ್ತರದಿಂದ ದಕ್ಷಿಣಕ್ಕೆ ಕನ್ನಡ‌ದ ಗಾಳಿ ಬೀಸಿದ‌ವರು ಅ.ನ.ಕೃ ಹಾಗೂ ಡಾ.‌ ಪಾಟೀಲ ಪುಟ್ಟಪ್ಪ ಅವರು ಮಾತ್ರ. ಇವರಿಬ್ಬರು ಕನ್ನಡ ನಾಡು-ನುಡಿಗೆ ಶ್ರಮಿಸಿದ ಧೀಮಂತ ವ್ಯಕ್ತಿಗಳು’ ಎಂದು ಸಾಹಿತಿ ಪ್ರೊ.ಜಿ.‌ಅಶ್ವತ್ಥನಾರಾಯಣ ಹೇಳಿದರು.

ಅ.ನ.ಕೃ ಪ್ರತಿಷ್ಠಾನದ ವತಿಯಿಂದ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ, ಪಾಟೀಲ ಪುಟ್ಟಪ್ಪ ಅವರಿಗೆ ಅ.ನ.ಕೃ. ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಅ.ನ.ಕೃ ಕೃತಿಗಳಿಗಿಂತ ಅವರ ವ್ಯಕ್ತಿತ್ವದಿಂದ ಬದುಕುವ ಕಲೆಯನ್ನು ಕಲಿಯುವುದು ಬಹಳಷ್ಟಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ವಿಶೇಷ ಸೇವೆ ಸಲ್ಲಿಸಿದರು. ಅವರ ತಾತ ಕೃಷ್ಣಪ್ಪಯೋಗಿ ಅವರು ಸರ್.ಎಂ. ವಿಶ್ವೇಶ್ವರಯ್ಯ  ಅವರನ್ನು ಸಾಕಿ ಸಲುಹಿದ ವ್ಯಕ್ತಿ’ ಎಂದು ಸ್ಮರಿಸಿದರು.

‘ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣರಾದರೂ, ರವೀಂದ್ರನಾಥ ಠಾಗೋರ್ ಅವರ ಪ್ರಭಾವಕ್ಕೆ ಒಳಗಾಗಿ ಕನ್ನಡ ಕಟ್ಟಿದ ಅವರ ವ್ಯಕ್ತಿತ್ವ ಇಂದಿನ ಕನ್ನಡಿಗರಿಗೆ ಅನುಕರಣೀಯ. ಅಖಂಡ ಕರ್ನಾಟಕ ಸುಸ್ವರ, ಸಪ್ತಸ್ವರ ಎಂದು ಹೇಳಿದ ಪ್ರಮುಖರಲ್ಲಿ ಇವರು ಒಬ್ಬರು’ ಎಂದು ಹೇಳಿದರು.

 ಪ್ರಶಸ್ತಿ ಸ್ವೀಕರಿಸಿದ ಡಾ.‌ ಪಾಟೀಲ ಪುಟ್ಟಪ್ಪ ಮಾತನಾಡಿ, ‘ಅ.ನ.ಕೃ ಅವರು ನನ್ನಂತಹ ಅನೇಕ ಚಿಕ್ಕವರನ್ನು ದೊಡ್ಡವರನ್ನಾಗಿ ಬೆಳೆಸಿದ್ದಾರೆ. ಕಾಲೇಜು ದಿನಗಳಿಂದಲೇ ತಾವು ಅವರ ಅಭಿಮಾನಿ’ ಎಂದರು.

ಡಾ.‌ಗುರುಲಿಂಗ‌ ಕಾಪಸೆ, ಡಾ. ಶಾಂತಿನಾಥ ದಿಬ್ಬದ, ಅ.ನ.ಕೃ ಪ್ರತಿಷ್ಠಾನ ಪದಾಧಿಕಾರಿಗಳಾದ ಶಾ.ಮಂ. ಕೃಷ್ಣರಾಯ, ಗೌತಮ,  ವಿ. ಲಕ್ಷ್ಮೀನಾರಾಯಣ, ಎಚ್.ಎಸ್. ಚಂದ್ರಶೇಖರ, ಕಲ್ಯಾಣರಾವ್,‌ ಶೋಭಾ ಗೌತಮ ಇದ್ದರು.

ಪ್ರಶಸ್ತಿಯು ₹50 ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ.

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !