ಶುಕ್ರವಾರ, ಡಿಸೆಂಬರ್ 6, 2019
17 °C

ಪಿಇಎಸ್ ವಿ.ವಿ: ಬಾಗಲಕೋಟೆಯ ವಿದ್ಯಾರ್ಥಿಗೆ ₹ 49.75 ಲಕ್ಷ ವೇತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಪಿಇಎಸ್‌ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್‌ ಸೈನ್ಸ್‌ ವ್ಯಾಸಂಗ ಮಾಡುತ್ತಿರುವ 7ನೇ ಸೆಮಿಸ್ಟರ್‌ ವಿದ್ಯಾರ್ಥಿ, ಬಾಗಲ ಕೋಟೆಯ ಮಂಜುನಾಥ ಭದ್ರಣ್ಣವರ್‌ ಅವರಿಗೆ ವಾರ್ಷಿಕ ₹ 49.75 ಲಕ್ಷ ವೇತನದ ಉದ್ಯೋಗ ಲಭಿಸಿದೆ.

ಆಸ್ಟ್ರೇಲಿಯಾದ ಅಟ್ಲಾಸಿಯಾನ್‌ ಕಾರ್ಪೊರೇಷನ್‌ ಸಾಫ್ಟ್‌ವೇರ್‌ ಕಂಪನಿಯಲ್ಲಿ ಅವರಿಗೆ ಈ ಕೆಲಸ ಲಭಿಸಿದ್ದು, ಬೆಂಗಳೂರಿನಲ್ಲೇ ನಿಯುಕ್ತಿಗೊಳ್ಳಲಿದ್ದಾರೆ.

ಮಂಜುನಾಥ್ ಅವರ ತಂದೆ ಬಾಗಲಕೋಟೆಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದು, ತಾಯಿ ಪ್ರಾಥಮಿಕ ಶಾಲಾ ಶಿಕ್ಷಕಿ.

‘ಪಿಎಎಸ್‌ ವಿಶ್ವವಿದ್ಯಾಲಯದಲ್ಲಿ ಎರಡು ಬಾರಿ ಸ್ಕಾಲರ್‌ಶಿಪ್‌ ಪಡೆದು ಕೊಂಡಿದ್ದೇನೆ. ಈ ಬಾರಿ ಗರಿಷ್ಠ ವೇತನದ ಉದ್ಯೋಗದ ಅವಕಾಶ ಸಿಕ್ಕಿದ್ದು ನನಗೇ. ಓದು ಮುಗಿದ ತಕ್ಷಣ ಕೆಲಸಕ್ಕೆ ಸೇರಿಕೊಳ್ಳಲಿದ್ದು, ಒಂದಷ್ಟು ಅನುಭವ ಆದ ಬಳಿಕ ಉನ್ನತ ವ್ಯಾಸಂಗ ಮಾಡುವ ವಿಚಾರ ಇದೆ’ ಎಂದು ಅವರು ಹೇಳಿದರು.

ವಿಜಯ‍ಪುರದ ಸೈನಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ್ದ ಮಂಜುನಾಥ ನೌಕಾಪಡೆಗೆ ಸೇರುವ ಇಚ್ಛೆ ಹೊಂದಿದ್ದರು. ಆದರೆ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಪರೀಕ್ಷೆಯ ಅಂತಿಮ ಸುತ್ತಿನಲ್ಲಿ ವಿಫಲರಾದ ಕಾರಣ ಪಿಇಎಸ್‌ ವಿ.ವಿ.ಗೆ ಸೇರಿದ್ದರು.

1,381 ಮಂದಿಗೆ ಉದ್ಯೋಗ: ಈ ವರ್ಷದ ಕ್ಯಾಂಪಸ್‌ ಸಂದರ್ಶನದಲ್ಲಿ ವಿ.ವಿ.ಯ 1,381 ಮಂದಿಗೆ ವಿವಿಧ ಕಂಪನಿಗಳಲ್ಲಿ ಉದ್ಯೋಗದ ಅವಕಾಶ ಲಭಿಸಿದ್ದು, ಸರಾಸರಿ ವಾರ್ಷಿಕ ಸಂಬಳ ₹ 8.27 ಲಕ್ಷ ಇದೆ ಎಂದು ಪಿಇಎಸ್‌ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು