ಉಳ್ಳಾಲ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಪೊಲೀಸರ ಅನುಮತಿ ನಿರಾಕರಣೆಯ ನಡುವೆಯೇ ಸೋಮವಾರ ಮಧ್ಯಾಹ್ನ ಇಲ್ಲಿ 2 ಕಿಲೋಮೀಟರ್ ದೂರದವರೆಗೆ ರ‍್ಯಾಲಿ ನಡೆಸಿದರು. ಕಾರ್ಯಕ್ರಮ ತಡೆಯಲು ಸನ್ನದ್ಧರಾಗಿದ್ದ ಪೊಲೀಸರ ಕಣ್ತಪ್ಪಿಸಿ ನೂರಾರು ಮಂದಿ ಮೆರವಣಿಗೆಯಲ್ಲಿ ಸಾಗಿದರು.

ಪಿಎಫ್‌ಐ ಸಂಸ್ಥಾಪನಾ ದಿನದ ಅಂಗವಾಗಿ ದೇರಳಕಟ್ಟೆಯ ಗ್ರೀನ್ ಮೈದಾನದಲ್ಲಿ ಸಂಘಟನೆಯ ಸದಸ್ಯರ ಸಮಾವೇಶ ಮತ್ತು ರ‍್ಯಾಲಿ ನಡೆಸುವುದಾಗಿ ಪಿಎಫ್‌ಐ ಪ್ರಕಟಿಸಿತ್ತು.

ಪೊಲೀಸರು ರ‍್ಯಾಲಿಗೆ ಅನುಮತಿ ನೀಡಿರಲಿಲ್ಲ. ಸೋಮವಾರ ಬೆಳಿಗ್ಗೆಯೇ 600ಕ್ಕೂ ಹೆಚ್ಚು ಪೊಲೀಸರನ್ನು ಮದನಿ ನಗರದಲ್ಲಿ ನಿಯೋಜಿಸಲಾಗಿತ್ತು. ರ‍್ಯಾಲಿ ನಡೆಸದಂತೆ ಪಿಎಫ್‌ಐ ಮುಖಂಡರಿಗೆ ಸೂಚನೆಯನ್ನೂ ಕೊಟ್ಟಿದ್ದರು.

ಪೊಲೀಸರು ಮದನಿ ನಗರದಲ್ಲಿ ಕಾಯುತ್ತಿರುವಾಗಲೇ ಆರು ಬಸ್‌ಗಳಲ್ಲಿ ಬಂದ ಸಮವಸ್ತ್ರಧಾರಿ ಪಿಎಫ್‌ಐ ಕಾರ್ಯ
ಕರ್ತರು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆ ಎದುರು ಇಳಿದು ರ‍್ಯಾಲಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.