ಕಾಂಗ್ರೆಸ್ಸಿಗರಿಂದ ಮೊಘಲರಿಗಿಂತಲೂ ಹೆಚ್ಚು ಲೂಟಿ: ಸಂಸದ ಪ್ರಹ್ಲಾದ ಜೋಷಿ ಆರೋಪ

7

ಕಾಂಗ್ರೆಸ್ಸಿಗರಿಂದ ಮೊಘಲರಿಗಿಂತಲೂ ಹೆಚ್ಚು ಲೂಟಿ: ಸಂಸದ ಪ್ರಹ್ಲಾದ ಜೋಷಿ ಆರೋಪ

Published:
Updated:

ಮಂಗಳೂರು: ‘ಮೊಘಲರಿಗಿಂತಲೂ ಹೆಚ್ಚು ಈ ದೇಶವನ್ನು ಲೂಟಿ ಮಾಡಿದವರು ಕಾಂಗ್ರೆಸ್ಸಿಗರು. ಈ ನಕಲಿ ಗಾಂಧಿಗಳ ಡಿಎನ್ಎನಲ್ಲಿಯೇ ಹಗರಣದ ಸಮಸ್ಯೆ ಇದೆ’ ಎಂದು ಸಂಸದ, ಪೆಟ್ರೋಲಿಯಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಹ್ಲಾದ ಜೋಷಿ ಆರೋಪಿಸಿದರು.

ನೆಹರೂ ಅವರಿಂದ ಹಿಡಿದು ಯುಪಿಎ 2ನೇ ಅವಧಿಯವರೆಗಿನ ಎಲ್ಲ ಕಾಂಗ್ರೆಸ್ ಸರ್ಕಾರಗಳು ಹಗರಣ ಮಾಡುತ್ತಲೇ ಬಂದಿವೆ. ಹಗರಣದ ಅಭ್ಯಾಸ ಇರುವ ಕಾಂಗ್ರೆಸ್ಸಿಗರು ಈಗ ರಫೇಲ್‌ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಇದಕ್ಕೆ ಸುಪ್ರೀಂ ಕೋರ್ಟ್ ಕೂಡ ಈ ಬಗ್ಗೆ ಸ್ಪಷ್ಟ ಅಭಿಪ್ರಾಯ ತಿಳಿಸಿದೆ ಎಂದರು.

‘ಪ್ರಿಯಾಂಕಾ ಗಾಂಧಿ ಬಂದರೆ ಪ್ರಧಾನಿ ಮೋದಿಗೆ ನಡುಕ ಆರಂಭವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ದೇಶದ ದೊಡ್ಡ ಲೂಟಿಕೋರ ರಾಬರ್ಟ್ ವಾದ್ರಾ ಅವರ ಪತ್ನಿ ಪ್ರಿಯಾಂಕಾ. ಇಂಥವರಿಂದ ಯಾವುದೇ ತೊಂದರೆ ಇಲ್ಲ’ ಎಂದರು. 

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 0

  Frustrated
 • 11

  Angry

Comments:

0 comments

Write the first review for this !