‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಜಾವಾಣಿಯೇ ಕೋಚಿಂಗ್ ಸೆಂಟರ್’

7

‘ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಜಾವಾಣಿಯೇ ಕೋಚಿಂಗ್ ಸೆಂಟರ್’

Published:
Updated:

ಧಾರವಾಡ: ‘ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರಜಾವಾಣಿ ಪತ್ರಿಕೆಯೇ ಕೋಚಿಂಗ್ ಸೆಂಟರ್ ಇದ್ದಂತೆ’ ಎಂದು ಮುಧೋಳದ ತಹಶೀಲ್ದಾರ್ ಶ್ರೀಧರ್ ಕೋಟುರು ಹೇಳಿದರು‌.

‘ಪ್ರಜಾವಾಣಿ’, ‘ಡೆಕ್ಕನ್‌ ಹೆರಾಲ್ಡ್‌’ ಇಲ್ಲಿ ಆಯೋಜಿಸಿರುವ, ‘ಕಾಂಪಿಟಿಟಿವ್ ಎಜು ಎಕ್ಸ್ ಪೊ’ ಕಾರ್ಯಗಾರದಲ್ಲಿ ಮಾತನಾಡಿದರು.

‘ಕೆಎಎಸ್‌ ಮುಖ್ಯ ಪರೀಕ್ಷೆಯಲ್ಲಿ ಶೇ. 50ರಷ್ಟು ಅಂಕಗಳಿಗೆ ಪ್ರಜಾವಾಣಿ ಓದಿನಿಂದಲೇ ಬರೆದಿದ್ದೇನೆ. ಪ್ರಬಂಧದ ಪುಸ್ತಕವನ್ನೇ ಓದಿಲ್ಲ. ಪ್ರಬಂಧ ಹೇಗೆ ಬರೆಯಬೇಕು ಎಂಬುದಕ್ಕೆ ಪ್ರಜಾವಾಣಿಯ ಸಂಪಾದಕೀಯವೇ ಸಾಕು’ ಎಂದರು.

‘ಕೆಎಎಸ್‌ ಅತ್ಯಂತ ಸುಲಭದ ಪರೀಕ್ಷೆ. ಈ ಪರೀಕ್ಷೆ ಬರೆಯುವ ಮುನ್ನ ನಾನು 35 ಪರೀಕ್ಷೆಗಳಲ್ಲಿ ಫೇಲಾಗಿದ್ದೆ. ಕೆಎಎಸ್‌ ಪರೀಕ್ಷೆಯನ್ನು ಒಮ್ಮೆಗೆ ಪಾಸಾದೆ. ಹಣ ಕೊಟ್ಟರೆ, ಪುಸ್ತಕ ಇದ್ದರೆ, ಕೋಚಿಂಗ್‌ ಸೆಂಟರ್‌ಗೆ ಕಳುಹಿಸಿದರೆ ಕೆಎಎಸ್‌, ಐಎಎಸ್‌ ಪಾಸಾಗುತ್ತಿದ್ದೆ ಎನ್ನುವುದು ಕೇವಲ ಭ್ರಮೆ. ನಾನು ಕೆಎಎಸ್‌ ಪ್ರಿಲಿಮ್ಸ್ ಪಾಸಾದ ಮೇಲೆಯೇ ಮುಖ್ಯ ಪರೀಕ್ಷೆಯ ಪುಸ್ತಕಗಳನ್ನು ಓದಿದ್ದು’ ಎಂದರು.

ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷೆ ಪಾಸಾಗಲು ಯಾವುದೇ ವಿಷಯದಲ್ಲಿ ತಜ್ಞರಾಗಬೇಕು ಎಂದೇನಿಲ್ಲ. ಪರೀಕ್ಷೆ ಪಾಸಾಗಬೇಕು ಎಂಬುದಷ್ಟೆ ಇಲ್ಲಿ ಮುಖ್ಯ. ಹೀಗಾಗಿ ಯಾವುದೇ ವಿಷಯದಲ್ಲಿ ತಜ್ಞರಾಗಬೇಕು ಎಂದು ಪರಿಶ್ರಮ ಪಡಬೇಡಿ ಎಂದು ಸಲಹೆ ನೀಡಿದರು.

ನಿಮಗೆ ಸುಲಭ, ಹೆಚ್ಚು ಅಂಕ ತೆಗೆಯಬಹುದು ಎನಿಸುವ ವಿಷಯಗಳನ್ನು ಹೆಚ್ಚು ಓದಿ ಕಠಿಣ ವಿಷಯಗಳನ್ನು ಓದಲು ಹೆಚ್ಚು ಸಮಯ ವ್ಯರ್ಥಮಾಡಲು ಹೋಗಬಾರದು ಎಂದು ತಿಳಿಸಿದರು.

ಹಳೆಯ ಪ್ರಶ್ನೆ ಪತ್ರಿಕೆಗಳ ಅವಲೋಕನ, ಒಂದೆರಡು ಪತ್ರಿಕೆಗಳ ಓದು ಮುಖ್ಯ. ಆದರೆ ಸತತ ಕನಸು ಅದುವೇ ಮುಖ್ಯ ಎಂದು ಹೇಳಿದರು.

ಕೆಪಿಎಸ್‌ಸಿ, ಯುಪಿಎಸ್‌ಸಿ ಪರೀಕ್ಷೆ ಎದುರಿಸಿ ಕೆಲಸ ಪಡೆದರೆ ಅಷ್ಟೇ ಬದುಕಲ್ಲ. ಇದು, ಸಾಧ್ಯವಾಗದಿದ್ದರೆ ಕೃಷಿ ಮಾಡಿ, ಉದ್ಯಮಿಗಳಾಗಿ. ಆದರೆ ಭ್ರಮನಿರಸನ ಆಗಬಾರದು ಎಂದರು.

ನೀವು ಏನಾಗಬೇಕು ಎಂಬುದನ್ನು ನೀವೆ ನಿರ್ಧರಿಸಿಕೊಳ್ಳಬೇಕು. ಬೇರೆಯವರ ಅನುಕರಣೆ ಬೇಡ. ನಿಮ್ಮದೇ ಮಾರ್ಗ ಅನುಸರಿಸಿ. ಪ್ರಶ್ನೆ ಪತ್ರಿಕೆಗಳ ಮಾದರಿ ನೋಡಿಕೊಳ್ಳಿ. ಮಾರುಕಟ್ಟೆಯಲ್ಲಿ ಸಿಕ್ಕಿದೆಲ್ಲವನ್ನು ಓದಬೇಡಿ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 14

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !