ಭಾನುವಾರ, ಆಗಸ್ಟ್ 18, 2019
26 °C

ಏರುತ್ತಲೇ ಇದೆ ‘ಪ್ರಜಾವಾಣಿ’ ಓದುಗ ಬಳಗ

Published:
Updated:

ಬೆಂಗಳೂರು: ಕನ್ನಡದ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆಯಾಗಿರುವ ‘ಪ್ರಜಾವಾಣಿ’ಯ ಓದುಗರ ಬಳಗವು 2019ರ ಎರಡನೇ ತ್ರೈಮಾಸಿಕದಲ್ಲಿ ಶೇ 2.7ರಷ್ಟು ಏರಿಕೆಯಾಗಿದೆ.

ದಿ ಪ್ರಿಂಟರ್ಸ್‌ (ಮೈಸೂರು) ಲಿಮಿಟೆಡ್‌ನ ಇಂಗ್ಲಿಷ್ ದಿನಪತ್ರಿಕೆಯಾದ ‘ಡೆಕ್ಕನ್‌ ಹೆರಾಲ್ಡ್‌’, ‘ಸುಧಾ’ ವಾರಪತ್ರಿಕೆ ಮತ್ತು ‘ಮಯೂರ’ ಮಾಸಪತ್ರಿಕೆಯ ಓದುಗರ ಪ್ರಮಾಣವೂ ಕ್ರಮವಾಗಿ ಶೇ 11, ಶೇ 7.9 ಮತ್ತು ಶೇ 10.6ರಷ್ಟು ಏರಿಕೆಯಾಗಿದೆ. ಓದುಗರ ಸಮೀಕ್ಷೆಯ (ಇಂಡಿಯನ್ ರೀಡರ್‌ಶಿಪ್‌ ಸರ್ವೆ–ಐಆರ್‌ಎಸ್‌) ವರದಿಯಲ್ಲಿ ಈ ಮಾಹಿತಿ ಇದೆ. 2019ರ ಮೊದಲ ತ್ರೈಮಾಸಿಕದಲ್ಲೂ ‘ಪ್ರಜಾವಾಣಿ’ಯ ಓದುಗರ ಬಳಗವು ಏರಿಕೆಯಾಗಿತ್ತು

* ಅತಿ ಹೆಚ್ಚು ಓದುಗರನ್ನು ಹೊಂದಿರುವ ಕನ್ನಡ ದಿನಪತ್ರಿಕೆಗಳ ಸಾಲಿನಲ್ಲಿ ‘ಪ್ರಜಾವಾಣಿ’ಯು ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಿಕೆಯಾಗಿದೆ

* ಇದೇ ಅವಧಿಯಲ್ಲಿ ವಿಜಯ ಕರ್ನಾಟಕ ಮತ್ತು ವಿಜಯವಾಣಿ ದಿನಪತ್ರಿಕೆಗಳ ಓದುಗರ ಸಂಖ್ಯೆಯು ಕ್ರಮವಾಗಿ ಶೇ 2.8 ಮತ್ತು ಶೇ 2.1ರಷ್ಟು ಏರಿಕೆಯಾಗಿದೆ.

ಆಧಾರ: ಐಆರ್‌ಎಸ್‌ ವರದಿ

Post Comments (+)