ಸೋಮವಾರ, ಡಿಸೆಂಬರ್ 9, 2019
16 °C
ಮಹಾರಾಷ್ಟ್ರ ರಾಜಕೀಯ

ಶಿವಸೇನಾಗೆ ಅಷ್ಟು ಸ್ಥಾನ ದೊರೆಯಲು ಪ್ರಧಾನಿ ಮೋದಿಯೂ ಕಾರಣ: ಪ್ರಹ್ಲಾದ್ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಮಹಾರಾಷ್ಟ್ರ ಚುನಾವಣೆಯಲ್ಲಿ ಶಿವಸೇನಾಗೆ ಅಷ್ಟು ಸ್ಥಾನ (56) ದೊರೆಯಲು ಪ್ರಧಾನಿ ನರೇಂದ್ರ ಮೋದಿಯವರೂ ಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ಶಿವಸೇನಾವು ಅಪ್ರಾಯೋಗಿಕ ಮತ್ತು ಅಸಾಧ್ಯವಾದ ಷರತ್ತುಗಳನ್ನು ಮುಂದಿಟ್ಟಿದ್ದರಿಂದ ಬಿಜೆಪಿಯು ಅತಿದೊಡ್ಡ ಪಕ್ಷವಾಗಿದ್ದರೂ ಸರ್ಕಾರ ರಚನೆಯಿಂದ ದೂರ ಉಳಿಯುವಂತಾಯಿತು. ಶಿವಸೇನಾ ಜತೆ ಉತ್ತಮ ಬಾಂಧವ್ಯ ಇರುವಂತೆ ನೋಡಿಕೊಳ್ಳಲು ನಾವು ಎಲ್ಲ ರೀತಿಯ ಪ್ರಯತ್ನ ಮಾಡಿದಿವು. ಆದರೆ, ಅವರು ಅಪ್ರಾಯೋಗಿಕ ಷರತ್ತುಗಳನ್ನು ಮುಂದಿಟ್ಟರು’ ಎಂದು ಜೋಶಿ ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರ ಬಿಕ್ಕಟ್ಟು: ಎನ್‌ಡಿಎಯಿಂದ ಹೊರಬಂದ ಶಿವಸೇನೆ

ಮಹಾರಾಷ್ಟ್ರ ಸರ್ಕಾರ ರಚನೆಗೆ ಸಂಬಂಧಿಸಿ ಉಂಟಾದ ಬಿಕ್ಕಟ್ಟಿನ ಪರಿಣಾಮವಾಗಿ ಎನ್‌ಡಿಎ ಮೈತ್ರಿಕೂಟದಿಂದ ಶಿವಸೇನಾ ಹೊರಬಂದಿದೆ. ಶಿವಸೇನಾ ಸಂಸದ ಹಾಗೂ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ ಸಚಿವ ಅರವಿಂದ್‌ ಸಾವಂತ್‌ ಅವರು ಕೇಂದ್ರ ಸಂಪುಟದಿಂದ ಹೊರ ಬಂದಿರುವುದಾಗಿ ಸೋಮವಾರ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು