ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ವಿಕಿರಣಕ್ಕೆ ಎನ್‌ವೈರೊಚಿಪ್‌ ರಕ್ಷಣೆ

Last Updated 25 ಮಾರ್ಚ್ 2020, 3:13 IST
ಅಕ್ಷರ ಗಾತ್ರ
ADVERTISEMENT
""

ಸ್ಮಾರ್ಟ್‌ ಸಾಧನಗಳೇ ನಮ್ಮೆಲ್ಲರ ಬದುಕನ್ನು ಈಗ ನಿಯಂತ್ರಿಸುತ್ತಿವೆ. ಮನೆ, ಕಚೇರಿ ಒಳಗೆ ಮತ್ತು ಹೊರಗೆ ನಾವೆಲ್ಲ ಬಳಸುವ ಮೊಬೈಲ್‌, ಲ್ಯಾಪ್‌ಟಾಪ್‌, ರೌಟರ್ಸ್‌, ಟ್ಯಾಬ್ಲೆಟ್‌ ಮತ್ತಿತರ ಎಲೆಕ್ಟ್ರಾನಿಕ್‌ ಸಾಧನಗಳು ಬಳಕೆದಾರರ ಪಾಲಿಗೆ ಅದೆಷ್ಟು ಸುರಕ್ಷಿತವಾಗಿವೆ ಎನ್ನುವುದರ ಯಾವುದೇ ಖಚಿತ ಅಧ್ಯಯನಗಳು ನಡೆದಿಲ್ಲ. 2007ರಲ್ಲಿ ಕಾರ್ಯಾರಂಭ ಮಾಡಿರುವ ಸಿನರ್ಜಿ ಎನ್‌ವೈರೊನಿಕ್ಸ್‌ (Syenergy Environics) ಕಂಪನಿಯು ವಿದ್ಯುತ್ಕಾಂತೀಯ ಅಲೆಗಳು (ವಿಕಿರಣ) ಮಾನವನ ದೇಹದ ಮೇಲೆ ಬೀರುವ ಪ್ರಭಾವಗಳ ಬಗ್ಗೆ ಅಧ್ಯಯನ ನಡೆಸಿತ್ತು. ಅಧ್ಯಯನದ ಫಲಶ್ರುತಿಯಾಗಿ, ಇಂತಹ ವಿಕಿರಣಗಳಿಂದ ವ್ಯಕ್ತಿಯ ಆರೋಗ್ಯದ ಮೇಲೆ ಆಗುವ ಅಪಾಯಗಳ ವಿರುದ್ಧ ರಕ್ಷಣೆ ನೀಡಲು ಕಂಪನಿಯು ದೇಶಿ ತಂತ್ರಜ್ಞಾನ ಬಳಸಿ ಎನ್‌ವೈರೊಚಿಪ್‌ (Envirochip) ಅಭಿವೃದ್ಧಿಪಡಿಸಿದೆ. ಈ ಪುಟ್ಟ ಸಾಧನವನ್ನು ಮೊಬೈಲ್‌ ಹಿಂಭಾಗದಲ್ಲಿ ಅಂಟಿಸಿದರೆ ಅದು ವಿಕಿರಣ ವಿರುದ್ಧ ರಕ್ಷಣೆ ಒದಗಿಸುತ್ತದೆ. ಆರೋಗ್ಯ, ಸುರಕ್ಷತೆ ಮತ್ತು ಪರಿಸರ ರಕ್ಷಣೆಯ ಯುರೋಪ್‌ ಮಾನದಂಡವಾದ ‘ಸಿಇ’ (Conformity European) ಪ್ರಮಾಣೀಕೃತ ಉತ್ಪನ್ನ ಇದಾಗಿರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ.

‘ವೈರ್‌ಲೆಸ್‌, ಐಒಟಿ ಡಿಜಿಟಲ್‌ ಸಾಧನ, ಮೊಬೈಲ್‌ ಟವರ್‌ಗಳ ಕಾರ್ಯಕ್ಷಮತೆಗೆ ಯಾವುದೇ ಅಡಚಣೆ ಉಂಟು ಮಾಡದೆ ಅವುಗಳಿಂದ ಹೊರಸೂಸುವ ಅಪಾಯಕಾರಿ ವಿಕಿರಣಗಳು ಜನರ ಮೇಲೆ ಬೀರಬಹುದಾದ ಪ್ರತಿಕೂಲ ಪರಿಣಾಮಗಳನ್ನು ತಡೆಗಟ್ಟುವುದು ಈ ಕಂಪನಿಯ ಮುಖ್ಯ ಉದ್ದೇಶವಾಗಿದೆ‘ ಎಂದು ನಿರ್ದೇಶಕ ಪ್ರಣವ್‌ ಪೋದ್ದಾರ್‌ ಹೇಳುತ್ತಾರೆ.

'ಮಾನವ ನಿರ್ಮಿತ ಮತ್ತು ನೈಸರ್ಗಿಕ ವಿಕಿರಣಗಳು ವ್ಯಕ್ತಿಯ ದಣಿವು ಹೆಚ್ಚಿಸುವ, ರೋಗ ನಿರೋಧಕ ಶಕ್ತಿ ಕುಗ್ಗಿಸುವುದೂ ಸೇರಿದಂತೆ ಅತ್ಯಂತ ವಿರಳ ಪ್ರಕರಣಗಳಲ್ಲಿ ಬ್ರೇನ್‌ ಟ್ಯೂಮರ್‌ಗೂ ಕಾರಣವಾಗುವ ಸಾಧ್ಯತೆ ಇರುತ್ತದೆ. ಎನ್‌ವಿರೊಚಿಪ್‌ ಮೊಬೈಲ್‌ ಮತ್ತು ಲ್ಯಾಪ್‌ಟಾಪ್‌ಗಳಿಂದ ಹೊರಸೂಸುವ ವಿಕಿರಣಗಳ ಪ್ರಭಾವ ತಗ್ಗಿಸಲು ನೆರವಾಗುತ್ತದೆ. ಎನ್‌ವಿರೊಗ್ಲೋಬ್‌ ಮೊಬೈಲ್‌ ಟವರ್ಸ್‌, ಹೈಟೆನ್ಶನ್‌ ತಂತಿ ಮತ್ತು ಸರ್ವರ್‌ ಕೋಣೆಗಳಿಂದ ಸುತ್ತಮುತ್ತಲಿನ ಪರಿಸರದ ಮೇಲೆ ಆಗುವ ಪ್ರತಿಕೂಲತೆಗಳ ತೀವ್ರತೆ ತಗ್ಗಿಸಲು ನೆರವಾಗುತ್ತವೆ.

'ವಿಕಿರಣಗಳಿಂದ ರಕ್ಷಣೆ ಒದಗಿಸುವ ತಂತ್ರಜ್ಞಾನವು ಅಂತರರಾಷ್ಟ್ರೀಯವಾಗಿ ಪರೀಕ್ಷೆಗೆ ಒಳಗಾಗಿದೆ. ಕಂಪನಿಯ ಉತ್ಪನ್ನಗಳಿಗೆ ಸಿಂಗಪುರದ ಗ್ರೀನ್‌ ಬಿಲ್ಡಿಂಗ್‌ ಕೌನ್ಸಿಲ್‌ ಸೇರಿದಂತೆ ವಿವಿಧ ವೈಜ್ಞಾನಿಕ ಮತ್ತು ವೈದ್ಯಕೀಯ ಸಂಸ್ಥೆಗಳು ಪ್ರಮಾಣ ಪತ್ರ ಲಭಿಸಿವೆ.

'ಸ್ಮಾರ್ಟ್‌ಫೋನ್‌ ಬಳಕೆದಾರರಲ್ಲದೆ, ಮನೆಗಳಿಂದ ಹಿಡಿದು ಉಕ್ಕು ಸ್ಥಾವರಗಳು, ವಿಮಾನ ನಿಲ್ದಾಣಗಳು, ವಿದ್ಯುತ್‌ ಉತ್ಪಾದನಾ ಘಟಕಗಳು, ಆಸ್ಪತ್ರೆ, ಶೈಕ್ಷಣಿಕ ಸಂಸ್ಥೆ, ಪಂಚತಾರಾ ಹೋಟೆಲ್‌, ಕಾರ್ಪೊರೇಟ್‌ ಕಚೇರಿವರೆಗೆ ಕಂಪನಿಯ ವಿಕಿರಣ ರಕ್ಷಕ ಉತ್ಪನ್ನಗಳು ದೇಶ –ವಿದೇಶಗಳಲ್ಲಿ ಬಳಕೆಯಾಗುತ್ತಿವೆ‘ ಎಂದು ಅವರು ಹೇಳುತ್ತಾರೆ.

ಪ್ರತಿಯೊಂದು ಮೊಬೈಲ್‌, ಸ್ಮಾರ್ಟ್‌ಫೋನ್‌ಗಳ ಜತೆಗೆ ತಯಾರಕರು ನೀಡಿರುವ ಬಳಕೆದಾರರ ಮಾರ್ಗಸೂಚಿಗಳನ್ನು ನೋಡುವ, ಓದುವ ವ್ಯವಧಾನವು ಯಾರಿಗೂ ಇಲ್ಲ. ಮೊಬೈಲ್‌ಗಳನ್ನು ಒಂದು ಗಂಟೆಯಲ್ಲಿ 6 ನಿಮಿಷಕ್ಕಿಂತ ಹೆಚ್ಚು ಸಮಯ ಬಳಸಬಾರದು, ದೇಹದ ಸಂಪರ್ಕದಲ್ಲಿ ಇರಬಾರದು ಎಂಬುದು ಸೇರಿದಂತೆ ನಾಲ್ಕು ಮುಖ್ಯ ಕಿವಿಮಾತುಗಳನ್ನು ಯಾರೊಬ್ಬರೂ ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ. ಈ ಮುಂಜಾಗ್ರತಾ ಕ್ರಮಗಳ ಬಗ್ಗೆ ಯಾರಿಗೂ ಅರಿವು ಕೂಡ ಇಲ್ಲ.

ತಂತ್ರಜ್ಞಾನವನ್ನು ಒಳಿತಕ್ಕೆ ಬಳಸುವುದರಿಂದ ಹೆಚ್ಚು ಪ್ರಯೋಜನಗಳಿವೆ. ಜತೆಗೆ, ಅದರ ಬಳಕೆ ಬಗ್ಗೆ ನಾವು ಹೆಚ್ಚು ಎಚ್ಚರವಹಿಸಬೇಕು. ಇಲ್ಲದಿದ್ದರೆ ಸ್ಮಾರ್ಟ್‌ ಸಾಧನಗಳಿಂದ ಹೊರಸೂಸುವ ವಿಕಿರಣಗಳು ಬಳಕೆದಾರರಲ್ಲಿನ ಮಾನಸಿಕ ದೈಹಿಕ ಒತ್ತಡದ ಮಟ್ಟ ಹೆಚ್ಚಿಸುತ್ತವೆ. ರೋಗ ನಿರೋಧಕ ಶಕ್ತಿ ಕುಗ್ಗಿಸುತ್ತವೆ. ನೆನಪಿನ ಶಕ್ತಿ ಕಡಿಮೆ ಮಾಡುತ್ತವೆ. ಸದ್ಯಕ್ಕೆ ಇವೆಲ್ಲವು ಸಾಬೀತಾಗಿಲ್ಲ. ಆದರೆ, ಅತಿಯಾದ ಬಳಕೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿರುವುದು ಕ್ರಮೇಣ ಅನೇಕರ ಅನುಭವಕ್ಕೆ ಬರುತ್ತಿದೆ.

’ಸ್ಮಾರ್ಟ್‌ ಸಾಧನಗಳು ಹೊರಸೂಸುವ ವಿಕಿರಣಗಳಿಂದ ರಕ್ಷಣೆ ಒದಗಿಸುವ ಸಾಧನಗಳನ್ನು ತಯಾರಿಸುತ್ತಿರುವ ಈ ದೇಶಿ ಕಂಪನಿಯು ಬಳಕೆದಾರರ ಹಿತ ರಕ್ಷಿಸುವ ಕಾರ್ಯದಲ್ಲಿ ತೊಡಗಿದೆ. ಪ್ರಮುಖ ಮಾರಾಟ ಮಳಿಗೆಗಳಾದ ಸಂಗೀತಾ ಮೊಬೈಲ್‌ ಮತ್ತು ಗಿರಿಯಾಸ್‌ಗಳಲ್ಲಿ ಈ ವಿಕಿರಣ ರಕ್ಷಕ ಸಾಧನಗಳು ದೊರೆಯುತ್ತಿವೆ‘ ಎಂದು ಪ್ರಣವ್‌ ಹೇಳುತ್ತಾರೆ.

’ಎನ್‌ವೈರೊಚಿಪ್‌, ತಾಂತ್ರಿಕವಾಗಿ ವಿಕಿರಣದ ಪ್ರಮಾಣ ಕಡಿಮೆ ಮಾಡುವುದಿಲ್ಲ. ಕಾನ್‌ಸ್ಟಂಟ್‌ ವೇವ್‌ಗಳನ್ನು ರ್‍ಯಾಂಡಂ ವೇವ್‌ಗಳನ್ನಾಗಿ ಪರಿವರ್ತಿಸುತ್ತದೆ. ರಿಟೇಲ್‌ ಮಾರುಕಟ್ಟೆಯಲ್ಲಿ ₹ 699ಕ್ಕೆ ಲಭ್ಯ ಇರುವ ಈ ಎನ್‌ವೈರೊ ಚಿಪ್‌ ಅನ್ನು ಮೊಬೈಲ್ ಹಿಂಭಾಗದಲ್ಲಿ ಅಂಟಿಸುವುದರಿಂದ ವಿಕಿರಣಗಳು ಬಳಕೆದಾರರ ಮೇಲೆ ಬೀರಬಹುದಾದ ಪ್ರಭಾವದ ತೀವ್ರತೆ ತಗ್ಗಿಸುತ್ತವೆ‘ ಎಂದು ಪ್ರಣವ್‌ ಹೇಳುತ್ತಾರೆ.

’ಗ್ಯಾಜೆಟ್‌ಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡುವವರಿಗೆ ಭವಿಷ್ಯದಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಯುವ ವಿಶಿಷ್ಟ ಸಾಧನ ಇದಾಗಿದೆ. ಹೊಸ ಮೊಬೈಲ್‌ ಖರೀದಿಸುವಾಗ ಇತರ ಬಿಡಿಭಾಗಗಳ ಜತೆಗೆ ಈ ಚಿಪ್‌ ಖರೀದಿಸಿ ಬಳಸುವುದರಿಂದ ಬಳಕೆದಾರರು ಆರೋಗ್ಯ ಸಂಬಂಧಿ ಅನೇಕ ಸಮಸ್ಯೆಗಳನ್ನು ತಮ್ಮಿಂದ ದೂರ ಇರಿಸಬಹುದು.ಕಚೇರಿ, ಮನೆಗಳಲ್ಲಿ ಒಂದಕ್ಕಿಂತ ಹೆಚ್ಚು ಸ್ಮಾರ್ಟ್‌ ಟಿವಿ, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಹೊರಸೂಸುವ ವಿಕಿರಣಗಳಿಂದ ಎನ್‌ವೈರೊ ಗ್ಲೋಬ್‌ ಸಾಧನವು ರಕ್ಷಣೆ ಒದಗಿಸುತ್ತದೆ.ಗುರುಗ್ರಾಮ್‌ನಲ್ಲಿ ದೇಶೀಯವಾಗಿ ತಯಾರಿಸಲಾಗುತ್ತಿದೆ. ಅನೇಕ ಕಾರ್ಪೊರೇಟ್‌ ಕಂಪನಿಗಳು ತಮ್ಮ ಸಿಬ್ಬಂದಿಗೆ ಕೊಡುಗೆ ನೀಡಲು ಈ ಉತ್ಪನ್ನಗಳನ್ನು ಖರೀದಿಸುತ್ತಿವೆ‘ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT