ಶುಕ್ರವಾರ, ಮಾರ್ಚ್ 5, 2021
27 °C
ಯದುವೀರ್‌ ನರಸಿಂಹರಾಜ ದತ್ತ ಒಡೆಯರ್‌, ಕೃಷ್ಣದೇವರಾಯ ಭಾಗಿ

ಹಂಪಿ ಸ್ಮಾರಕಗಳಿಗೆ ಹಾನಿ ಪ್ರಕರಣ: ಎ.ಎಸ್‌.ಐ. ಕಚೇರಿ ಎದುರು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸಪೇಟೆ: ಹಂಪಿ ಸ್ಮಾರಕಗಳಿಗೆ ಹಾನಿ ಉಂಟು ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ತಾಲ್ಲೂಕಿನ ಕಮಲಾಪುರದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯನ್ನು ಬೆಂಬಲಿಸಿ ಮೈಸೂರಿನ ಯದುವೀರ್‌ ನರಸಿಂಹರಾಜ ದತ್ತ ಒಡೆಯರ್‌, ವಿಜಯನಗರ ರಾಜಮನೆತನದ ಕೃಷ್ಣದೇವರಾಯ ಪಾಲ್ಗೊಂಡಿದ್ದರು. 

ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣೆ ಸೇನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ವಿಜಯನಗರ ಅಂಗವಿಕಲರ ಸಂಘ, ಜನ್ಮಭೂಮಿ ರಕ್ಷಣಾ ಪಡೆ, ಗಂಡುಗಲಿ ಕುಮಾರರಾಮ ಸೇನೆ ಸಂಘಟನೆ ಬೆಂಬಲ ವ್ಯಕ್ತಪಡಿಸಿತ್ತು.

ಕಮಲಾಪುರದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್‌.ಐ.) ಹಂಪಿ ವೃತ್ತದ ಕಚೇರಿ ಎದುರು ಪ್ರತಿಭಟನೆ ನಡೆಸಿ, ನಂತರ ಎ.ಎಸ್‌.ಐ. ಡೆಪ್ಯುಟಿ ಸೂಪರಿಟೆಂಡೆಂಟ್‌ ಪಿ. ಕಾಳಿಮುತ್ತು ಅವರಿಗೆ ಮನವಿ ಪತ್ರ ಸಲ್ಲಿಸಿದರು.

‘ಹಂಪಿಯಲ್ಲಿರುವ ಎಲ್ಲ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ವಿಷ್ಣು ದೇಗುಲ ಮಂಟಪದ ಕಲ್ಲುಗಂಬಗಳನ್ನು ಬೀಳಿಸಿ, ವಿಡಿಯೊ ವೈರಲ್‌ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ಸಂರಕ್ಷಣೆ ಸೇನೆಯ ಮುಖ್ಯಸ್ಥ ವಿಶ್ವನಾಥ ಮಾಳಗಿ, ಮುಖಂಡರಾದ ಈರಣ್ಣ ಪೂಜಾರಿ, ಗುರುನಾಥ, ಶ್ರೀನಿವಾಸ ಗುಜ್ಜಲ್‌, ಉಪೇಂದ್ರ ನಾಯಕ, ಶಿವಕುಮಾರ ಇದ್ದರು.

ಇನ್ನಷ್ಟು...

ಹಂಪಿ ಸ್ಮಾರಕದ ಕಲ್ಲು ಬೀಳಿಸುವ ವಿಡಿಯೊ ವೈರಲ್‌​

ಹಂಪಿ: ಕಲ್ಲುಗಂಬಗಳನ್ನು ಬೀಳಿಸುವ ವಿಡಿಯೊ ವೈರಲ್‌, ವಶಕ್ಕೆ ಪಡೆದು ಯುವಕನ ವಿಚಾರಣೆ​

ಸ್ಮಾರಕದ ಕಲ್ಲು ಬೀಳಿಸಿದ ದುಷ್ಟರನ್ನು ಬಂಧಿಸಿ: ಪೊಲೀಸರಿಗೆ ಜನರ ತಾಕೀತು​

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು