ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಕೆಯಿಂದ ಗೆಲುವು...?

Last Updated 27 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇತ್ತೀಚೆಗೆ ಶೃಂಗೇರಿಯ ದೇವಸ್ಥಾನಕ್ಕೆ ಭೇಟಿ ನೀಡಿ, ಶಾರದಾ ಪೀಠಕ್ಕೆ ಪೂಜೆ ಸಲ್ಲಿಸಿದರು. ನಂತರ ಮಠದ ಶ್ರೀಗಳ ಜತೆಗೆ ಅಧ್ಯಾತ್ಮದ ಬಗ್ಗೆ ಚರ್ಚಿಸಿದರು. ಮಠದ ಪಾಠಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿರುವುದಾಗಿಯೂ ವರದಿಯಾಗಿದೆ. ಮುಂದೆ, ಶೃಂಗೇರಿಯಿಂದ ಚಿಕ್ಕಮಗಳೂರಿಗೆ ತೆರಳಿದ ರಾಹುಲ್, ತಮಗೆ ಶೃಂಗೇರಿ ಪೀಠದಲ್ಲಿನ ಧಾರ್ಮಿಕ, ಆಧ್ಯಾತ್ಮಿಕ ವಾತಾವರಣದಲ್ಲಿ ಉಂಟಾದ ಅನುಭವಗಳ ಬಗ್ಗೆ ಏನನ್ನೂ ಹೇಳದೆ, ‘ಶೃಂಗೇರಿ ಪಾಠಶಾಲೆಯಲ್ಲಿ ಹದಿನೈದು ವರ್ಷದ ಮಕ್ಕಳಿಗೆ ಅರ್ಥವಾಗುವ ಧರ್ಮದ ವಿಚಾರ ನಮ್ಮ ಪ್ರಧಾನಿಗೆ ಅರ್ಥವಾಗುತ್ತಿಲ್ಲ’ ಎಂದು ಹೇಳುವುದರ ಮೂಲಕ ಮೋದಿ ಟೀಕೆಯಲ್ಲಿ ತೊಡಗಿಸಿಕೊಂಡರು. ಮಠ– ಮಂದಿರಗಳ ಭೇಟಿಯ ಹಿಂದಿರುವ ರಾಜಕೀಯ ಉದ್ದೇಶವನ್ನು ತಮ್ಮ ಮಾತಿನಿಂದಲೇ ಅವರು ತೋರಿಸಿಕೊಟ್ಟರು.

ಪುರಾಣಗಳ ಯುಗದಲ್ಲಿ, ಕಂಸನಿಗೆ ಎಲ್ಲೆಲ್ಲೂ ತನ್ನ ವೈರಿ ಕೃಷ್ಣನೇ ಕಂಡುಬಂದಂತೆ, ರಾಹುಲ್‌ಗೆ ಎಲ್ಲಿಗೇ ಹೋದರೂ ಮೋದಿ ಭಯವೇ ಕಾಡುತ್ತಿರುವಂತೆ ಕಾಣುತ್ತದೆ. ಆದರೆ ಮೋದಿ ದ್ವೇಷ, ಮೋದಿ ಟೀಕೆ ಇವುಗಳಿಂದಲೇ ದೇಶದಲ್ಲಿ ಮುಂಬರುವ ಚುನಾವಣೆಗಳಲ್ಲಿ ಗೆದ್ದು ಅಧಿಕಾರಕ್ಕೆ ಬರಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವೇ? ಕಾದು ನೋಡಬೇಕಾಗಿದೆ.

ಎಸ್. ಚಂದ್ರಶೇಖರ ಸೋಮಯಾಜಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT