ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯು: ಬಾಲಕಿಯರ ಮೇಲುಗೈ, ಉಡುಪಿ ಮೊದಲು, ಚಿತ್ರದುರ್ಗ ಕೊನೆ

Last Updated 15 ಏಪ್ರಿಲ್ 2019, 5:42 IST
ಅಕ್ಷರ ಗಾತ್ರ

ಬೆಂಗಳೂರು:ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿದರು.

ಮಾರ್ಚ್‌ 1ರಿಂದ 18ರವರೆಗೆಪರೀಕ್ಷೆ ನಡಿದತ್ತು. 6.71 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,16,587 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು ಶೇ61.73ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಮಾಣ ಶೇ 2.17 ಜಾಸ್ತಿ ಆಗಿದೆ. ಬಾಲಕಿಯರು ಶೇ 68.24 ಮತ್ತು ಬಾಲಕರು ಶೇ 55.29ರ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದಾರೆ.

ಉಡುಪಿ ಜಿಲ್ಲೆ ಶೇ 92.20 ತೇರ್ಗಡೆಯ ಪ್ರಮಾಣದೊಂದಿಗೆ ಮೊದಲ ಸ್ಥಾನ ಪಡೆದಿದೆ.ದಕ್ಷಿಣ ಕನ್ನಡ ದ್ವಿತೀಯ, ಕೊಡಗು ಶೇ 83.31 ತೇರ್ಗಡೆ ಪ್ರಮಾಣದೊಂದಿಗೆತೃತೀಯ ಸ್ಥಾನ ಪಡೆದುಕೊಂಡಿದೆ.ಚಿತ್ರದುರ್ಗ ಶೇ51.42ರಷ್ಟು ಫಲಿತಾಂಶ ಪಡೆದಿದ್ದು ಕೊನೆಯ ಸ್ಥಾನ ಪಡೆದಿದೆ.

ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಇಂದು (ಏ.15– ಸೋಮವಾರ) ಮಧ್ಯಾಹ್ನ 12ಕ್ಕೆ ಪದವಿ ಪೂರ್ಣ ಶಿಕ್ಷಣಇಲಾಖೆಯ ವೆಬ್‌ಸೈಟ್‌ www.pue.kar.nic.in ಮತ್ತುwww.karresults.nic.in ರಲ್ಲಿ ಲಭ್ಯವಾಗಲಿದೆ. ಜೀವಶಾಸ್ತ್ರದ (ಬಯಾಲಜಿ) ಪ್ರಶ್ನಪತ್ರಿಕೆ ಕಷ್ಟವಿತ್ತು ಎನ್ನುವ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿದ್ದವು. ಈ ಹಿನ್ನೆಲೆಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಫಲಿತಾಂಶ ಮತ್ತು ಗಳಿಸಿದ ಅಂಕ ತಿಳಿದುಕೊಳ್ಳಲುಕಾತರದಿಂದಕಾಯುತ್ತಿದ್ದರು.

ಮಧ್ಯಾಹ್ನ 12 ಕ್ಕೆ ಇಲಾಖೆ ವೆಬ್‌ಸೈಟ್‌ www.pue.kar.nic.in ಮತ್ತುwww.karresults.nic.in ರಲ್ಲಿ ಫಲಿತಾಂಶವನ್ನು ಅಪ್‌ಲೋಡ್‌ ಮಾಡಲಾಗುವುದು ಎಂದು ಇಲಾಖೆಯ ನಿರ್ದೇಶಕಿ ಶಿಖಾ ತಿಳಿಸಿದ್ದಾರೆ. ನಾಳೆ (ಮಂಗಳವಾರ) ಕಾಲೇಜುಗಳಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT