ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ರಾಜ್‌ ನೆನೆಯುತ್ತಾ ‘ವಾರ ಬಂತಮ್ಮ ಗುರುವಾರ ಬಂತಮ್ಮ...’ ಹಾಡು ಹಾಡಿದ ಪುನೀತ್‌

Last Updated 3 ಮಾರ್ಚ್ 2020, 9:45 IST
ಅಕ್ಷರ ಗಾತ್ರ

ರಾಯಚೂರು: ‘ಐದು ದಶಕಗಳಿಂದ ನಮ್ಮ ಕುಟುಂಬದ ಸದಸ್ಯರೆಲ್ಲರೂ ರಾಯರ ಭಕ್ತರು. ಯಾವುದೇ ಶುಭಕಾರ್ಯ ಆರಂಭಿಸುವಾಗ ರಾಯರ ಆಶೀರ್ವಾದ ಸ್ಮರಿಸುತ್ತೇವೆ’ ಎಂದು ಚಿತ್ರನಟ ಪುನೀತರಾಜಕುಮಾರ್‌ ಹೇಳಿದರು.

ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮದಿನದಂದು ನಡೆದ ವರ್ಧಂತಿ ಮಹೋತ್ಸವದಲ್ಲಿ ಪಾಲ್ಗೊಂಡು ರಾಯರ ದರ್ಶನ ಪಡೆದು ಹಾಗೂ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಮಂತ್ರಾಲಯಕ್ಕೆ ಬಂದರೆ ನಮ್ಮ ಮನೆಗೆ ಬಂದಂತ ಅನುಭವ. ಹಳೇ ನೆನಪುಗಳು ಬರುತ್ತವೆ’ ಎಂದು ಭಾಗ್ಯವಂತರು ಸಿನಿಮಾ ಚಿತ್ರೀಕರಣದ ಸಂದರ್ಭವನ್ನು ನೆನಪಿಸಿಕೊಂಡರು.

‘ಅಪ್ಪಾಜಿ (ಡಾ.ರಾಜಕುಮಾರ್‌) ಅವರು ರಾಘವೇಂದ್ರ ಸ್ವಾಮೀಜಿ ಅವರ ಕುರಿತು ಹಾಡಿದ ಹಾಡುಗಳು ಜಗತ್‌ಪ್ರಸಿದ್ಧವಾಗಿವೆ. ಅವರು ರಾಯರ ಪಾತ್ರ ಮಾಡಿದ ಬಳಿಕ, ರಾಘವೇಂದ್ರ ಸ್ವಾಮಿಗಳು ಹೀಗೆ ಇದ್ದರೆನೋ.. ಎನ್ನುವಂತಹ ಅನುಭವ ಎಲ್ಲರಲ್ಲೂ ಬಂತು’ ಎಂದರು.

ಡಾ.ರಾಜಕುಮಾರ್‌ ಅವರನ್ನು ನೆನೆಪಿಸಿಕೊಳ್ಳುತ್ತಾ ‘ವಾರ ಬಂತಮ್ಮ ಗುರುವಾರ ಬಂತಮ್ಮ...’ ಹಾಡು ಹಾಡಿದರು.

ಈ ಹಾಡನ್ನು ಮತ್ತೊಮ್ಮೆ ಅಭ್ಯಾಸ ಮಾಡಿಕೊಂಡು, ಅಗಸ್ಟ್‌ನಲ್ಲಿ ರಾಯರ ಆರಾಧನೆ ಸಂದರ್ಭದಲ್ಲಿ ಪೂರ್ಣವಾಗಿ ಹಾಡುತ್ತೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT