ಚಿಕ್ಕೋಡಿ: ಮುಳುಗಡೆ ಸ್ಥಿತಿಯಲ್ಲಿ 7 ಸೇತುವೆ
ಬೆಳಗಾವಿ: ಜಿಲ್ಲೆಯ ವಿವಿಧೆಡೆ ಭಾನುವಾರ ಮಳೆ ಮುಂದುವರಿಯಿತು.
ದಕ್ಷಿಣ ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದಿದೆ. ಹೀಗಾಗಿ ಆ ರಾಜ್ಯದ ರಾಜಾಪುರ ಬ್ಯಾರೇಜ್ನಿಂದ ಕೃಷ್ಣಾನದಿಗೆ ಬಿಡುತ್ತಿರುವ ನೀರಿನ ಪ್ರಮಾಣ ಜಾಸ್ತಿಯಾಗಿದೆ. 36,066 ಕ್ಯುಸೆಕ್ ನೀರು ಹರಿಬಿಡಲಾಗಿದೆ.
ಕೃಷ್ಣಾ ನದಿಗೆ ಕಲ್ಲೋಳ ಬಳಿ ನಿರ್ಮಿಸಲಾದ ಕಲ್ಲೋಳ–ಯಡೂರ, ವೇದ ಹಾಗೂ ದೂಧ್ಗಂಗಾ ನದಿಗೆ ಕಾರದಗಾದಲ್ಲಿ ನಿರ್ಮಿಸಿರುವ ಕಾರದಗಾ–ಭೋಜ, ವೇದಗಂಗಾ ನದಿಗೆ ಭೋಜದಲ್ಲಿ ಕಟ್ಟಿರುವ ಭೋಜವಾಡಿ–ಕುನ್ನೂರ, ಸಿದ್ನಾಳ ಬಳಿಯ ಸಿದ್ನಾಳ–ಅಕ್ಕೋಳ, ಜತ್ರಾಟದಲ್ಲಿನ ಜತ್ರಾಟ–ಭಿವಶಿ, ದೂಧ್ಗಂಗಾ ನದಿಗೆ ಮಲ್ಲಿಕವಾಡ ಬಳಿ ನಿರ್ಮಿಸಿರುವ ಮಲಿಕವಾಡ–ದತ್ತವಾಡ ಸೇತುವೆಗಳು ಮುಳುಗಡೆ ಸ್ಥಿತಿಯಲ್ಲಿವೆ. ಇವು ಚಿಕ್ಕ ಬ್ರಿಡ್ಜ್ ಕಮ್ ಬ್ಯಾರೇಜ್ಗಳಾಗಿವೆ. ಪರ್ಯಾಯ ರಸ್ತೆಗಳಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿಲ್ಲ; ಗ್ರಾಮಗಳ ಸಂಪರ್ಕ ಕಡಿತಗೊಂಡಿಲ್ಲ.
ಖಾನಾಪುರ ತಾಲ್ಲೂಕಿನಾದ್ಯಂತ ಸತತ ವರ್ಷಧಾರೆಯಾಗಿದೆ. ಉಳಿದಂತೆ ಬೆಳಗಾವಿ ತಾಲ್ಲೂಕು, ಬೈಲಹೊಂಗಲ, ಹಿರೇಬಾಗೇವಾಡಿ, ಚನ್ನಮ್ಮನ ಕಿತ್ತೂರು, ಎಂ.ಕೆ. ಹುಬ್ಬಳ್ಳಿ ಪರಿಸರದಲ್ಲಿ ಮಳೆ ಬಿದ್ದಿತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.