ಮಂಗಳವಾರ, ಏಪ್ರಿಲ್ 7, 2020
19 °C

ಉಡುಗೊರೆ ಈಗ ಜೆಡಿಎಸ್ ಅಭ್ಯರ್ಥಿ ಸರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣರಿಂದ ಟಿಫನ್‌ ಕ್ಯಾರಿಯರ್ ಹಂಚಿಕೆ ಸುದ್ದಿ ಬೆನ್ನಲ್ಲೇ, ಜೆಡಿಎಸ್‌ ಅಭ್ಯರ್ಥಿ ಎ.ಪಿ. ರಂಗನಾಥ್‌ ಅವರಿಂದ ಬ್ಯಾಗ್‌ ಹಂಚಿಕೆ ಸುದ್ದಿಯಾಗುತ್ತಿದೆ.

ಜೆಡಿಎಸ್‌ ಅಭ್ಯರ್ಥಿಯಾಗಿರುವ ರಂಗನಾಥ್‌ ಅವರೂ ಸಹ ಈಗಾಗಲೇ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಹೆಸರು ಇರುವ ಬ್ಯಾಗ್‌ಗಳು ಹಲವರ ಕೈಯಲ್ಲಿ ಕಾಣಿಸಿಕೊಂಡಿವೆ. ಅದರ ಮೇಲೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರೂ ಆದ ರಂಗನಾಥ್‌ ಹೆಸರು ಬರೆಯಲಾಗಿದ್ದು, ಶಿಕ್ಷಣವೇ ನಾಡಿನ ಬಹುದೊಡ್ಡ ಆಸ್ತಿ ಎಂದು ಶಿಕ್ಷಕರನ್ನು ಉತ್ತೇಜಿಸುವ ಮಾತುಗಳು ಇವೆ. ವಾರಗಳ ಹಿಂದೆಯೇ ಇದನ್ನು ಹಂಚಲಾಗಿದೆ ಎಂದು ಕೆಲವು ಶಿಕ್ಷಕರು ಹೇಳಿದ್ದಾರೆ. ಆದರೆ ಬ್ಯಾಗ್‌ನ ಮೇಲೆ ಬರೆದ ಅಕ್ಷರಗಳಲ್ಲಿ ಎಲ್ಲಿಯೂ ಚುನಾವಣೆಯ ವಿಚಾರ ಪ್ರಸ್ತಾಪ ಆಗಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು