ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ.ಚಿ. ರಮೇಶ್‌ ಹಂಪಿ ಕನ್ನಡ ವಿ.ವಿ. ನೂತನ ಕುಲಪತಿ

Last Updated 21 ಫೆಬ್ರುವರಿ 2019, 11:48 IST
ಅಕ್ಷರ ಗಾತ್ರ

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಸ.ಚಿ. ರಮೇಶ್‌ ನೇಮಕಗೊಂಡಿದ್ದಾರೆ. ರಮೇಶ್‌ ಅವರು ಯಾವ ದಿನ ಅಧಿಕಾರ ಸ್ವೀಕರಿಸುತ್ತಾರೋ ಆ ದಿನದಿಂದ ಮೂರು ವರ್ಷಗಳ ವರೆಗೆ ಕುಲಪತಿಯಾಗಿ ಮುಂದುವರೆಯುವರು ಎಂದು ರಾಜ್ಯಪಾಲರು ಫೆ.20ರಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ರಮೇಶ್‌ ಅವರು ಕನ್ನಡ ವಿ.ವಿ. ಆರಂಭಗೊಂಡ ದಿನದಿಂದಲೂ ಅಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ. 2012ರಿಂದ 2015ರ ವರೆಗೆ ಜಾನಪದ ವಿಶ್ವವಿದ್ಯಾಲಯದಲ್ಲಿ ಕುಲಸಚಿವರಾಗಿ (ಮೌಲ್ಯಮಾಪನ) ಕೆಲಸ ಮಾಡಿದ್ದಾರೆ. ನಂತರ ಪುನಃ ಕನ್ನಡ ವಿ.ವಿ.ಗೆ ಮರಳಿದರು. ಸದ್ಯ ಅವರು ಸಮಾಜ ವಿಜ್ಞಾನ ನಿಕಾಯದ ಡೀನ್‌ ಆಗಿದ್ದಾರೆ.ಒಕ್ಕಲಿಗ ಸಮುದಾಯಕ್ಕೆ ಸೇರಿರುವ ರಮೇಶ್‌ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸರಳ ಗ್ರಾಮದವರು.

‘ಹಾಲಿ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ಕೆಲಸದ ನಿಮಿತ್ತ ಕೋಲ್ಕತ್ತಕ್ಕೆ ಹೋಗಿದ್ದಾರೆ. ರಮೇಶ್‌ ಅವರು ಸದ್ಯ ಬೆಂಗಳೂರಿನಲ್ಲಿದ್ದಾರೆ. ಇಬ್ಬರು ಫೆ. 22ರಂದು ವಿ.ವಿ.ಗೆ ಬರುವರು. ಈ ಸಂದರ್ಭದಲ್ಲಿ ಮಲ್ಲಿಕಾ ಘಂಟಿ, ರಮೇಶ್‌ ಅವರಿಗೆ ಅಧಿಕಾರ ಹಸ್ತಾಂತರಿಸುವರು’ ಎಂದು ಕುಲಸಚಿವ ಅಶೋಕಕುಮಾರ ರಂಜೇರೆ ‘ಪ್ರಜಾವಾಣಿ’ಗೆ ತಿಳಿಸಿದರು.

2018ರ ಸೆ.8ರಂದು ಘಂಟಿ ಅವರ ಅಧಿಕಾರಾವಧಿ ಪೂರ್ಣಗೊಂಡಿತ್ತು. ನಂತರ ರಾಜ್ಯಪಾಲರು ನಾಲ್ಕು ತಿಂಗಳವರೆಗೆ ವಿಸ್ತರಣೆ ಮಾಡಿದ್ದರು. ಆ ಅವಧಿ ಜ.7ರಂದು ಕೊನೆಗೊಂಡಿತ್ತು. ಮತ್ತೆ, ಜ.9ರಿಂದ ಅನ್ವಯವಾಗುವಂತೆ ಒಂದು ತಿಂಗಳ ಕಾಲ ಸೇವಾ ಅವಧಿ ವಿಸ್ತರಿಸಿ ರಾಜ್ಯಪಾಲರು ಆದೇಶಿಸಿದ್ದರು. ಅದು ಫೆ. 8ಕ್ಕೆ ಕೊನೆಗೊಂಡಿತ್ತು. ಪುನಃ ಫೆ. 9ರಿಂದ ಜಾರಿಗೆ ಬರುವಂತೆ ಒಂದು ತಿಂಗಳವರೆಗೆ ಮೂರನೇ ಬಾರಿಗೆ ಅಧಿಕಾರ ವಿಸ್ತರಣೆ ಮಾಡಿದ್ದರು. ಆ ಅವಧಿ ಪೂರ್ಣಗೊಳ್ಳುವ ಮೊದಲೇ ಹೊಸ ಕುಲಪತಿ ನೇಮಕ ಆದೇಶ ಹೊರಬಿದ್ದಿದೆ. ಜ. 7ರಂದು ನಡೆದ ಶೋಧನಾ ಸಮಿತಿ ಸಭೆಯಲ್ಲಿ ಮೂವರ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಸಲ್ಲಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT