ಬುಧವಾರ, ಜೂಲೈ 8, 2020
28 °C
ಪ್ರಧಾನಿಗೆ ಪತ್ರ ಬರೆದ ಆಟೊರಿಕ್ಷಾ ಚಾಲಕ

ಔಷಧ ಪ್ರಯೋಗಕ್ಕೆ ದೇಹ ನೀಡಲು ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಇಲ್ಲಿನ ಆಟೊರಿಕ್ಷಾ ಚಾಲಕರೊಬ್ಬರು ತಮ್ಮ ದೇಹವನ್ನು ಕೋವಿಡ್ 19 ಔಷಧ ಪ್ರಯೋಗಕ್ಕೆ ಬಳಸಿಕೊಳ್ಳಬಹುದು ಎಂದು ಪ್ರಧಾನಮಂತ್ರಿಗೆ ಪತ್ರ ಬರೆದು ತಿಳಿಸಿದ್ದಾರೆ.

ಆಟೊರಿಕ್ಷಾ ಓಡಿಸಿ ಜೀವನ ನಡೆಸುವ ವಿಶ್ವನಾಥ ಗೌಡ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ, ‘ಕೊರೊನಾ ವೈರಸ್‌ ನಿಯಂತ್ರಿಸಲು ಹಲವಾರು ಔಷಧ ಪ್ರಯೋಗ ಮಾಡಲಾಗುತ್ತಿದೆ. ನನಗೆ ದೇಶದ ಮೇಲೆ ಅಭಿಮಾನವಿದೆ. ಹೀಗಾಗಿ, ಈ ಔಷಧ ಪ್ರಯೋಗವನ್ನು ನನ್ನ ದೇಹದ ಮೇಲೆ ಮಾಡಬಹುದು. ಸ್ವ ಇಚ್ಛೆಯಿಂದ ದೇಹವನ್ನು ದಾನ ಮಾಡಲು ಸಿದ್ಧನಿದ್ದೇನೆ’ ಎಂದು ತಿಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು