ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಹಲಸಿನ ಹಣ್ಣಿನ ಬೆಲೆ ₹1200!

Last Updated 29 ಏಪ್ರಿಲ್ 2018, 9:49 IST
ಅಕ್ಷರ ಗಾತ್ರ

ತೋವಿನಕೆರೆ: ಈ ಬಾರಿ ಗಾತ್ರದ ಹಲಸಿನ ಹಣ್ಣಿನ ಬೆಲೆ ಬರೋಬ್ಬರಿ ₹ 1,200! 65 ಕೆಜಿ ತೂಕದ ಈ ಹಣ್ಣನ್ನು ಗುಬ್ಬಿ ತಾಲ್ಲೂಕಿನ ಚೇಳೂರು ಮಾರುಕಟ್ಟೆಗೆ ಶುಕ್ರವಾರ ಇಬ್ಬರು ರೈತರು ಹೊತ್ತು ತಂದಾಗ ಅಲ್ಲಿದ್ದವರೆಲ್ಲ ಚಕಿತರಾದರು. ಇದೇನಿದು ಇಂಥ ಹಣ್ಣು! ಎಂದು ಹುಬ್ಬೇರಿಸಿದರು.

ರಾಜ್ಯದ ಅತಿ ದೊಡ್ಡ ಹಲಸಿನ ಮಾರುಕಟ್ಟೆಯ ಖ್ಯಾತಿ ಚೇಳೂರು ಮಾರುಕಟ್ಟೆಗಿದೆ. ಪ್ರತಿ ಶುಕ್ರವಾರ, ಶನಿವಾರ ಎರಡು ದಿನ ಇಲ್ಲಿ ಹಲಸಿನ ಸಂತೆ ನಡೆಯುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳ ವ್ಯಾಪಾರಿಗಳಲ್ಲದೆ, ಹೊರ ರಾಜ್ಯಗಳ ವ್ಯಾಪಾರಿಗಳು ಸಹ ಇಲ್ಲಿಗೆ ಬಂದು ಹಲಸು ಖರೀದಿ ಮಾಡುತ್ತಾರೆ.

ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿ ಗಡಿಯಂಕನಹಳ್ಳಿ ನಟರಾಜ್ ಈ ಹಣನ್ನು ತಂದಿದ್ದರು. ಮೂರು ಅಡಿ ಉದ್ದ, ಎರಡು ಅಡಿ ಸುತ್ತಳತೆ ಹೊಂದಿರುವ ಹಣ್ಣನ್ನು ಆಸಕ್ತರೊಬ್ಬರು ₹ 1,200 ನೀಡಿ ಖರೀದಿ ಮಾಡಿದರು. ಇದೇ ವೇಳೆ ಮತ್ತೊಬ್ಬರು ಮರು ಖರೀದಿಗೆ ₹1300ಕ್ಕೆ ಕೇಳಿದರು. ಆದರೆ ಅವರು ಕೊಡಲಿಲ್ಲ.

‘ಇದು ಈ ವರ್ಷದ ಮೊದಲ ಹಣ್ಣು. ಸಾಮಾನ್ಯವಾಗಿ 40ರಿಂದ 45 ಕೆಜಿ ತೂಕದ ಹಣ್ಣುಗಳು ಬಿಡುತ್ತವೆ. ತೊಳೆಗಳು ಅರ್ಧ ಅಡಿ ಉದ್ದ  ಇರುತ್ತವೆ. ಹಳದಿ ಬಣ್ಣದಿಂದ ಕೂಡಿರುವ ತೊಳೆಗಳು ಸಿಹಿಯಾಗಿರುತ್ತವೆ. ಮೊದಲೆಲ್ಲ ಇಷ್ಟು  ದಪ್ಪಗಾತ್ರದ ಹಣ್ಣುಗಳು ಬಿಡುತ್ತಿರಲಿಲ್ಲ. ನಾಲ್ಕೈದು ವರ್ಷಗಳಿಂದ ಈಚೆಗೆ ದಪ್ಪ ಗಾತ್ರದ ಹಣ್ಣುಗಳನ್ನು ಬಿಡುತ್ತಿದೆ. ಹದಿನೈದು ವರ್ಷದ ಹಿಂದಿನ ಮರ ಇದಾಗಿದೆ’ ಎಂದು ಬೆಳೆಗಾರ ನಟರಾಜ್ ಮಾಹಿತಿ ನೀಡಿದರು.

ಗಾಢ ಕೆಂಪು, ರುಚಿಯ ಕಾರಣಕ್ಕಾಗಿ ಚೇಳೂರಿನ ’ಸಿದ್ದು’ ಹಲಸಿನ ತಳಿ ಈಗಾಗಲೇ ದೇಶ–ವಿದೇಶಗಳ ಗಮನ ಸೆಳೆದಿದೆ. ಈಗ ಇದೇ ಪ್ರದೇಶದ ಈ ಮರದ ಹಣ್ಣುಗಳು ಗಮನ ಸೆಳೆಯಬಹುದು ಎಂಬುದು ಇಲ್ಲಿನ ಬೆಳೆಗಾರರು ಅಭಿಪ್ರಾಯ‍‍ಪಟ್ಟರು.

‘ನಾವು ಕೇಳಿರುವಂತೆ ಮಹಾರಾಷ್ಟ್ರದ ಪುಣೆಯಲ್ಲಿ 42 ಕೆಜಿಯ ಹಲಸು ಹಣ್ಣು ಸಿಕ್ಕಿದ್ದು ಈವರೆಗಿನ ದಾಖಲೆಯಾಗಿತ್ತು. ಈ ಹಣ್ಣಿನ ಬಗ್ಗೆ ಮೊದಲೇ ಮಾಹಿತಿ ಇದ್ದರೆ, ಆಸಕ್ತರು ಗಮನ ಹರಿಸಿದ್ದರೆ  ಗಿನ್ನೆಸ್‌ ದಾಖಲೆಗೆ ಪಾತ್ರವಾಗುವ ಸಾಧ್ಯತೆ ಇತ್ತು. ಈ ಮರದ ತಳಿ ವೃದ್ಧಿಗೆ ಸರ್ಕಾರ ಗಮನ ಹರಿಸಬೇಕು’ ಎಂದು ಸಿದ್ದು ಹಲಸು ತಳಿಯ ಮಾಲೀಕ ಪರಮೇಶ್ವರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
–ಪದ್ಮರಾಜ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT