ಛಾಯಾಚಿತ್ರ ಸ್ಪರ್ಧೆ: ಕಾರ್ತಿಕ್‌, ಹರ್ಷದ್‌ಗೆ ಪ್ರಶಸ್ತಿ

7
ಸಾಗರ ಫೋಟೊಗ್ರಾಫಿಕ್‌ ಸೊಸೈಟಿ ಛಾಯಾಚಿತ್ರ ಸ್ಪರ್ಧೆ

ಛಾಯಾಚಿತ್ರ ಸ್ಪರ್ಧೆ: ಕಾರ್ತಿಕ್‌, ಹರ್ಷದ್‌ಗೆ ಪ್ರಶಸ್ತಿ

Published:
Updated:
Prajavani

ಬೆಂಗಳೂರು: ಸಾಗರ ಫೋಟೊಗ್ರಾಫಿಕ್‌ ಸೊಸೈಟಿ ಏರ್ಪಡಿಸಿದ್ದ ರಾಜ್ಯಮಟ್ಟದ ಛಾಯಾಗ್ರಹಣ ಸ್ಪರ್ಧೆಯ ‘ಗ್ರಾಮೀಣ ಬದುಕು’ ವಿಭಾಗದಲ್ಲಿ ಮಂಗಳೂರಿನ ಕಾರ್ತಿಕ್‌ ಎಂ.ಡಿ. ಹಾಗೂ ‘ಮದುವೆಯ ಕ್ಯಾಂಡಿಡ್‌ ಕ್ಷಣ’ ವಿಭಾಗದಲ್ಲಿ ಧಾರವಾಡದ ಹರ್ಷದ್‌ ಉದಯ್‌ ಕಾಮತ್‌ ಅವರು ಕ್ಲಿಕ್ಕಿಸಿದ ಛಾಯಾಚಿತ್ರಗಳಿಗೆ ಪ್ರಥಮ ಬಹುಮಾನ ಲಭಿಸಿದೆ.

ಸೊಸೈಟಿಯ ಸ್ಥಾಪಕ ಅಧ್ಯಕ್ಷರಾದ ಡಾ.ಡಿ.ವಿ.ರಾಯ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ 2018ನೇ ಸಾಲಿನ ಸ್ಪರ್ಧೆಗೆ 78 ಯುವ ಛಾಯಾಗ್ರಾಹಕರು (35 ವರ್ಷಗಳೊಳಗಿನವರು) ಒಟ್ಟು 400 ಛಾಯಾಚಿತ್ರಗಳನ್ನು ಕಳುಹಿಸಿಕೊಟ್ಟಿದ್ದರು. ಛಾಯಾಗ್ರಾಹಕರ ಜಿ.ಆರ್‌.ಪಂಡಿತ್‌ ತೀರ್ಪುಗಾರರಾಗಿದ್ದರು.

ಅಂತಿಮ ಸುತ್ತಿಗೆ ಆಯ್ಕೆಗೊಂಡ 110 ಛಾಯಾಚಿತ್ರಗಳ ಪ್ರದರ್ಶನ ಹಾಗೂ ಬಹುಮಾನ ವಿತರಣಾ ಸಮಾರಂಭವು ಏಪ್ರಿಲ್‌ ತಿಂಗಳಿನಲ್ಲಿ ಸಾಗರದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಬಹುಮಾನ ವಿಜೇತರು:

ವಿಷಯ: ಗ್ರಾಮೀಣ ಬದುಕು

ಪ್ರಥಮ: ಕಾರ್ತಿಕ್‌ ಎಂ.ಡಿ. ಮಂಗಳೂರು.

ದ್ವಿತೀಯ: ಗಣೇಶ್‌ ಸಾಂತ್ಯಾರ್‌, ಪೆರ್ಡೂರು

**

ವಿಷಯ: ಮದುವೆಯ ಕ್ಯಾಂಡಿಡ್‌ ಕ್ಷಣ

ಪ್ರಥಮ: ಹರ್ಷದ್‌ ಕಾಮತ್‌, ಧಾರವಾಡ


‘ಮದುವೆಯ ಕ್ಯಾಂಡಿಡ್‌ ಕ್ಷಣ’ ವಿಭಾಗ: ಹರ್ಷದ್‌ ಕಾಮತ್‌ ತೆಗೆದ ಛಾಯಾಚಿತ್ರ

ದ್ವಿತೀಯ: ಅಪುಲ್‌ ಆಳ್ವ ಇರಾ, ಮಂಗಳೂರು

ಅತ್ಯುತ್ತಮ ಆ್ಯಕ್ಷನ್‌: ಪಿ.ಆಕಾಶ್‌ ಮುನ್ನಂಗಿ ಮೋಟೆಬೆನ್ನೂರು

ಅತ್ಯುತ್ತಮ ಸಂಯೋಜನೆ: ಪವನ್‌ ಸಲಾಯ, ಮಂಗಳೂರು‌

ಅತ್ಯುತ್ತಮ ಛಾಯಗ್ರಾಹಕಿ: ಪ್ರಣಮ್ಯಾ ಜೈನ್‌, ನರಸಿಂಹರಾಜಪುರ

ಅತ್ಯುತ್ತಮ ವಿದ್ಯಾರ್ಥಿ ಛಾಯಾಗ್ರಾಹಕ: ಮನೋಜ್‌ ಎಂ.ಭಟ್‌, ದೇವಿಸರ, ಶೃಂಗೇರಿ

ಪ್ರಶಂಸೆಗೆ ಪಾತ್ರವಾದ ಛಾಯಾಗ್ರಾಹಕರು: ಹರ್ಷ ಎನ್‌. ಸಾಗರ, ಅಶ್ವತ್ಥ ದೇವಾಡಿಗ ಪೆರುವಾಜೆ, ವಿಶ್ವನಾಥ ಬಡಿಗೇರ್‌ ದೋಟಿಹಾಳ, ನಿದೀಶ್‌ ಪಕ್ಕಳ ಉಡುಪಿ, ಎಸ್‌.ಎ.ನಂದನ್‌ ಹೆಗಡೆ, ಸುದರ್ಶನ, ಕಾರ್ತಿಕ್‌ ಎಸ್‌.ಕಾರ್ಗಲ್ಲು ಬಂಟ್ವಾಳ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !