ಪ್ರಜಾವಾಣಿಗೆ ಸಾಹಿತ್ಯ ಅಕಾಡೆಮಿ ಗೌರವ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2018ನೇ ಸಾಲಿನಿಂದ ಆರಂಭಿಸಿರುವ ‘ಮುದ್ರಣ ಮಾಧ್ಯಮ ಸಾಹಿತ್ಯ ಪುರಸ್ಕಾರ’ಕ್ಕೆ ‘ಪ್ರಜಾವಾಣಿ’ ದಿನಪತ್ರಿಕೆ ಹಾಗೂ ‘ಡಿಜಿಟಲ್ ಮಾಧ್ಯಮ ಸಾಹಿತ್ಯ ಪುರಸ್ಕಾರ’ಕ್ಕೆ ‘ಅವಧಿ’ ಆನ್ಲೈನ್ ನಿಯತಕಾಲಿಕೆ ಪಾತ್ರವಾಗಿವೆ.
ಪ್ರಶಸ್ತಿಯು ತಲಾ ₹ 25 ಸಾವಿರ ಒಳಗೊಂಡಿದೆ.
‘ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಗೆ ಪ್ರಾಧಾನ್ಯ ನೀಡಿ ಕಾರ್ಯನಿರ್ವಹಿಸುತ್ತಿರುವುದರಿಂದ ಈ ಎರಡು ಸಂಸ್ಥೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ’ ಎಂದು ಅಕಾಡೆಮಿ ಅಧ್ಯಕ್ಷ ಅರವಿಂದ ಮಾಲಗತ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
* ಇದನ್ನೂ ಓದಿ: ವೆಂಕಟೇಶಮೂರ್ತಿ, ವಿವೇಕ ರೈ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ
‘ವೈಚಾರಿಕ, ಸಾಹಿತ್ಯಿಕ ಬರಹಗಳು, ಹೊಸ ಬರಹಗಾರರಿಗೆ ನೀಡಿದ ಅವಕಾಶ, ಲೇಖನ ಸ್ಪರ್ಧೆಗಳು, ಬರಹಗಳ ಮೂಲಕ ಬಿತ್ತಿದ ಮೌಲ್ಯಗಳನ್ನು ಪರಿಗಣಿಸಿ ‘ಪ್ರಜಾವಾಣಿ’ಗೆ ಪುರಸ್ಕಾರ ನೀಡಲಾಗಿದೆ’ ಎಂದರು.
‘ಸಮಕಾಲೀನ ವಿಷಯದ ಚರ್ಚೆಗಳು, ವಿನ್ಯಾಸ, ಗುಣಮಟ್ಟ, ಕಡಿಮೆ ಅವಧಿಯಲ್ಲಿ ಹೆಚ್ಚು ಓದುಗರಿಗೆ ತಲುಪುವ ಸಾಧ್ಯತೆ ಪರಿಗಣಿಸಿ ‘ಅವಧಿ’ಗೆ ಪ್ರಶಸ್ತಿ ನೀಡಲಾಗುತ್ತಿದೆ’ ಎಂದರು.
ಬರಹ ಇಷ್ಟವಾಯಿತೆ?
0
0
0
0
0
0 comments
View All