ಮಂಗಳವಾರ, ಅಕ್ಟೋಬರ್ 20, 2020
22 °C

ಜಾತ್ಯತೀತತೆಯೇ ಗಾಂಧಿ ಯಶಸ್ಸಿನ ಗುಟ್ಟು: ರಂಗಕರ್ಮಿ ಪ್ರಸನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನೈಜ ಜಾತ್ಯತೀತತೆಯೇ ಮಹಾತ್ಮ ಗಾಂಧೀಜಿಯವರು ಏಕಕಾಲದಲ್ಲಿ ಸಂತನೂ, ರಾಜಕಾರಣಿಯೂ ಆಗಿ ಯಶಸ್ಸು ಪಡೆಯಲು ಸಾಧ್ಯವಾಗಿಸಿತು ಎಂದು ಚಿಂತಕ, ರಂಗಕರ್ಮಿ ಪ್ರಸನ್ನ ಹೇಳಿದರು.

ನಗರದ ಸೇಂಟ್ ಅಲೋಶಿಯಸ್ ಕಾಲೇಜಿನ ಕನ್ನಡ‌ ವಿಭಾಗದ ವತಿಯಿಂದ ಸೋಮವಾರ ಆಯೋಜಿಸಿದ್ದ ' ಭಾರತೀಯ ಜಾತ್ಯತೀತವಾದ ಮತ್ತು ಕನ್ನಡದ ಪ್ರತಿಕ್ರಿಯೆ' ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧಿ ಧಾರ್ಮಿಕ ಸಹಿಷ್ಣುತೆಯ ನೆಲೆಯಲ್ಲಿಯೇ ಜಾತ್ಯತೀತವಾದವನ್ನು ಬಲಗೊಳಿಸುವ ಪ್ರಯತ್ನ ಮಾಡಿದರು. ಅದರಲ್ಲಿ ಅವರು ಯಶಸ್ಸನ್ನು ಕಂಡರು. ಆದರೆ, ಕಳೆದ ನಾಲ್ಕು ದಶಕಗಳ ಈಚೆಗೆ ಧರ್ಮ ಮತ್ತು ಜಾತ್ಯತೀತತೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದರಿಂದ ಧಾರ್ಮಿಕ ಉಗ್ರವಾದ ಬೆಳೆದು ನಿಂತಿದೆ ಎಂದರು.

ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು 'ನಕಲಿ ಜಾತ್ಯತೀತತೆ' ಎಂಬ ಪದವನ್ನು ಬಳಕೆಗೆ ತಂದರು. ಅದನ್ನು ತಮ್ಮ ಪಕ್ಷದಲ್ಲಿ ಅನ್ವಯಿಸುವಾಗ ಎಡವಿದರು. ಅದು ಧಾರ್ಮಿಕ ಉಗ್ರವಾದ ಬೆಳೆಯಲು ಕಾರಣವಾಯಿತು. ಬೆಳೆದುನಿಂತ ಧಾರ್ಮಿಕ ಉಗ್ರವಾದ ಅಡ್ವಾಣಿ ಅವರನ್ನೇ ಬದಿಗೆ ಸರಿಸಿತು ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು