ಬುಧವಾರ, ಸೆಪ್ಟೆಂಬರ್ 18, 2019
21 °C

ಪಂಡಿತಾರಾಧ್ಯ ಶ್ರೀ ಆಸ್ಟ್ರೇಲಿಯಾ ಪ್ರವಾಸ

Published:
Updated:
Prajavani

ಚಿತ್ರದುರ್ಗ: ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮೇ 6ರಿಂದ 16ರವರೆಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳುತ್ತಿದ್ದಾರೆ.

ಆಸ್ಟ್ರೇಲಿಯಾ ಬಸವಸಮಿತಿ ರಚನೆಯಾಗಿ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಿಡ್ನಿಯಲ್ಲಿ ಏರ್ಪಡಿಸಿರುವ ‘ಅಂತರರಾಷ್ಟ್ರೀಯ ವಚನ ಸಾಹಿತ್ಯ ಸಮ್ಮೇಳನ’ದಲ್ಲಿ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಶಿವಕುಮಾರ ಕಲಾಸಂಘದ ಕಲಾವಿದರು ‘ಉರಿಲಿಂಗ ಪೆದ್ದಿ’ ನಾಟಕ ‍ಪ್ರದರ್ಶಿಸಲಿದ್ದಾರೆ ಎಂದು ಮಠದ ‍ಪ್ರಕಟಣೆ ತಿಳಿಸಿದೆ. ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ 25 ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಬೇವಿನಕೊಪ್ಪದ ಎಂಬುವರ ಮನೆಯಲ್ಲಿ ‘ಬಸವ ಸಮಿತಿ’ಯನ್ನು ಹುಟ್ಟುಹಾಕಿದ್ದರು.

Post Comments (+)