ಗುರುವಾರ , ಜೂನ್ 24, 2021
22 °C

ಕ್ವಾರಂಟೈನ್‌ ಮುದ್ರೆಯಿದ್ದ ವ್ಯಕ್ತಿ ಸಾವು: ಎರಡು ಗಂಟೆ ರಸ್ತೆಯಲ್ಲೇ ಉಳಿದ ಶವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೋಕರ್ಣ: ಮಹಾರಾಷ್ಟ್ರದ ರತ್ನಗಿರಿಯಿಂದ ಪಾಸ್ ಪಡೆದು ಮಂಗಳೂರಿಗೆ ಹೊರಟ ಕುಟುಂಬದ ಸದಸ್ಯರೊಬ್ಬರು ಹಿರೇಗುತ್ತಿಯ ಬಳಿ ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಕರುಣಾಕರ ಶೆಟ್ಟಿ (75) ಎಂದು ಗುರುತಿಸಲಾಗಿದೆ. ಖಾಸಗಿ ವಾಹನದಲ್ಲಿ ಐವರು ಪ್ರಯಾಣಿಸುತ್ತಿದ್ದರು. ಹಿರೇಗುತ್ತಿಯ ಬಳಿ ವಾಹನ ಕೆಟ್ಟು ನಿಂತಾಗ ಅವರಿಗೆ ಏಕಾಏಕಿ ಎದೆ ನೋವು ಕಾಣಿಸಿಕೊಂಡಿತು. ವಾಹನದಲ್ಲಿ ಜೊತೆಗಿದ್ದವರು ಚಿಕಿತ್ಸೆ ಕೊಡಿಸಲು ಪ್ರಯತ್ನಿಸುತ್ತಿದ್ದಾಗಲೇ ನಿಧನರಾದರು.

ಕ್ವಾರೆಂಟೈನ್ ಮುದ್ರೆ: ಮಹಾರಾಷ್ಟ್ರ, ಗೋವಾ ದಾಟಿ ಕರ್ನಾಟಕ ಪ್ರವೇಶಿಸಿದಾಗ ಅವರ ಕೈ ಮೇಲೆ ಕ್ವಾರೆಂಟೈನ್ ಮುದ್ರೆ ಒತ್ತಲಾಗಿತ್ತು. ಇದನ್ನು ನೋಡಿದ ಸ್ಥಳೀಯರು ಅವರ ಹತ್ತಿರ ಹೋಗಲು ಹಿಂಜರಿದರು. ಅವರ ಕುಟುಂಬದವರು ಎಷ್ಟೇ ಮನವಿ ಮಾಡಿದರೂ ಪ್ರಯೋಜನ‌ವಾಗಲಿಲ್ಲ. ಸುಮಾರು ಎರಡು ಗಂಟೆ ಮೃತದೇಹವು ರಸ್ತೆಯ ಮೇಲೆಯೇ ಇತ್ತು. ನಂತರ ಸಾಮಾಜಿಕ ಕಾರ್ಯಕರ್ತ ರಾಮು ಕೆಂಚನ್ ಸ್ಥಳಕ್ಕೆ ಬಂದು ಪೊಲೀಸ್ ಅಧಿಕಾರಿಗಳ ಸಹಾಯದಿಂದ ಆಂಬುಲೆನ್ಸ್ ಮೂಲಕ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು