ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾಲಾಲ್‍ ಜಯಂತಿ: ಸ್ಥಳ ತಲುಪಿದ ಭಕ್ತರು

Last Updated 13 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ನ್ಯಾಮತಿ: ಸಂತ ಸೇವಾಲಾಲ್‌ ಅವರ 280ನೇ ಜಯಂತಿ ಕಾರ್ಯಕ್ರಮದ ನಿಮಿತ್ತ ಮಾಲಾಧಾರಿಗಳು ಬುಧವಾರ ತಾಲ್ಲೂಕಿನ ಸೂರಗೊಂಡನಕೊಪ್ಪ ತಲುಪಿದ್ದಾರೆ.

ಕಾಟಿ ಆರೋಹಣದೊಂದಿಗೆ ಬೆಳಿಗ್ಗೆ ಸಾಂಪ್ರದಾಯಿಕ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭಗೊಂಡವು. ಸತ್ಸಂಗ, ಪವಿತ್ರ ದೂದಿಯ ತಳಾವುಗೆ ಕಳಸದ ಆಗಮನವಾಯಿತು. ಸಮಾಜದ ಮಹಿಳೆಯರಿಂದ ಪೂರ್ಣಕುಂಭ ಮೆರವಣಿಗೆ, ಅಭಿಷೇಕ, ಮಾಲಾಧಾರಿಗಳಿಂದ ದರ್ಶನ ನಡೆಯಿತು.

ಜಾಗರಣೆ ಮತ್ತು ಪ್ರಾರ್ಥನೆ ಬಳಿಕ ಫೆ.14ರಂದು ಬೆಳಿಗ್ಗೆ ಭೋಗ್‌ ಸಮರ್ಪಣೆ ಹಾಗೂ ಮಾಲಾ ವಿಸರ್ಜನೆ ಕಾರ್ಯಕ್ರಮ ಪವಿತ್ರ ವೃಕ್ಷದ ಬಳಿ ನಡೆಯಲಿದೆ.

ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ, ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ನಡೆಸುತ್ತಿರುವ ಈ ಜಯಂತ್ಯುತ್ಸವವನ್ನು ಫೆ. 14ರಂದು ಮಧ್ಯಾಹ್ನ 2ಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ.

* ಸಂತ ಸೇವಾಲಾಲ್‌ ಹೆಸರಿನಲ್ಲಿ 48, 21, 18, 9 ಮತ್ತು 5 ದಿನಗಳ ಮಾಲಾಧಾರಿಗಳಾಗಿ ವ್ರತ ಕೈಗೊಂಡು ಪಾದಯಾತ್ರೆಯ ಮೂಲಕ ಕ್ಷೇತ್ರಕ್ಕೆ ಬಂದಿದ್ದೇವೆ.

- ರುದ್ರಾನಾಯ್ಕ ಮಾಲಾಧಾರಿ, ನಿಚ್ಚವ್ವನಹಳ್ಳಿ ತಾಂಡಾ

* ಸುಮಾರು ನಾಲ್ಕು ಲಕ್ಷ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

- ರುದ್ರಪ್ಪ ಲಮಾಣಿ, ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT