ಸಿದ್ಧಗಂಗಾ ಸ್ವಾಮೀಜಿ: ಸೋಂಕಿನಿಂದ ಗುಣಮುಖ

ತುಮಕೂರು: ‘ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ಸೋಂಕಿನ ಅಂಶವೂ ಕಡಿಮೆ ಆಗಿದೆ. ಉಸಿರಾಟಕ್ಕೆ ಇನ್ನೂ ಶಕ್ತಿ ಬರಬೇಕಿದೆ. ರಕ್ತದೊತ್ತಡ, ನಾಡಿಮಿಡಿತ ಸರಿಯಾಗಿದೆ’ ಎಂದು ಸಿದ್ಧಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸ್ವಾಮೀಜಿ ಆಪ್ತ ವೈದ್ಯರಾದ ಡಾ.ಪರಮೇಶ್ ಹೇಳಿದರು.
‘ಭಾನುವಾರ ನಾವು ಬಾಹ್ಯವಾಗಿ ‘ಅಲ್ಬುಮಿನ್’ ಪ್ರೋಟಿನ್ ಅಂಶ ಕೊಟ್ಟಿದ್ದರಿಂದ 2.6 ರಿಂದ 2.9ಕ್ಕೆ ಪ್ರೋಟಿನ್ ಅಂಶ ಸುಧಾರಿಸಿದೆ. ಉಸಿರಾಟಕ್ಕೆ ಇನ್ನೂ ಅವರಿಗೆ ಶಕ್ತಿ ಬರಬೇಕಿದೆ. ಸಹಜವಾಗಿ ದೇಹದಲ್ಲಿ ಪ್ರೊಟೀನ್ ಅಂಶ, ರಕ್ತದ ಕಣಗಳ ಉತ್ಪಾದನೆ ಸುಧಾರಣೆ ಆದರೆ ಉಸಿರಾಟಕ್ಕೆ ಶಕ್ತಿ ಬರುತ್ತದೆ’ ಎಂದು ಸುದ್ದಿಗಾರರಿಗೆ ವಿವರಿಸಿದರು.
‘ಸ್ವಾಮೀಜಿಯವರ ಆರೋಗ್ಯ ಇನ್ನೂ ಸುಧಾರಣೆ ಆಗಬೇಕಿದೆ. ಮಠಕ್ಕೆ ಈಗಲೇ ಸ್ಥಳಾಂತರ ಮಾಡುವ ತೀರ್ಮಾನ ಮಾಡಿಲ್ಲ’ ಎಂದು ತಿಳಿಸಿದರು.
ಬರಹ ಇಷ್ಟವಾಯಿತೆ?
0
0
1
0
0
0 comments
View All