ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಂದ್ಲಾಜೆ ₹ 10 .48 ಕೋಟಿ ಒಡತಿ

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ
Last Updated 23 ಮಾರ್ಚ್ 2019, 2:50 IST
ಅಕ್ಷರ ಗಾತ್ರ

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ₹ 7.38 ಕೋಟಿ ಮೌಲ್ಯದ ಚರಾಸ್ತಿ, ₹3.10 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಜತೆಗೆ ₹ 4.99 ಕೋಟಿ ಸಾಲ ಹೊಂದಿದ್ದಾರೆ.

ಕೈನಲ್ಲಿ ₹ 1.29 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳ ಉಳಿತಾಯ ಖಾತೆಗಳಲ್ಲಿ ₹ 71.92 ಲಕ್ಷ ಠೇವಣಿ, ಹಾಗೂ ₹ 4.65 ಲಕ್ಷ ಸ್ಥಿರ ಠೇವಣಿ ಹೊಂದಿದ್ದಾರೆ.

1 ಕೆ.ಜಿ. ಚಿನ್ನದ ಬಿಸ್ಕೆಟ್‌, 650 ಗ್ರಾಂ ಚಿನ್ನದ ಆಭರಣ, 1 ಕೆ.ಜಿ. 620 ಗ್ರಾಂ ಬೆಳ್ಳಿ ಹಾಗೂ ಟೊಯೊಟಾ ಇನ್ನೋವಾ ಕಾರು, ಹೋಂಡಾ ಆ್ಯಕ್ಟಿವಾ ಸ್ಕೂಟರ್ ಹೊಂದಿದ್ದಾರೆ. ಬಿ.ಎ, ಮಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್‌ಡಬ್ಲ್ಯೂ ಹಾಗೂ ಮೈಸೂರು ಮುಕ್ತ ವಿವಿಯಲ್ಲಿ ಎಂಎ (ಸೋಷಾಲಜಿ) ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶೋಭಾ ಅವರ ವಿರುದ್ಧ (ಕ್ರೈ ನಂಬರ್, 627/17) ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಇದೆ ಎಂಬ ಮಾಹಿತಿ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT