25 ರಿಂದ ಶ್ರೀ ಗುರು ರಾಘವೇಂದ್ರರಾಯರ ಆರಾಧನಾ ಮಹೋತ್ಸವ

7

25 ರಿಂದ ಶ್ರೀ ಗುರು ರಾಘವೇಂದ್ರರಾಯರ ಆರಾಧನಾ ಮಹೋತ್ಸವ

Published:
Updated:
Deccan Herald

ರಾಯಚೂರು: ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 347ನೇ ಆರಾಧನಾ ಮಹೋತ್ಸವವು ಆಗಸ್ಟ್‌ 25 ರಿಂದ 31 ರವರೆಗೂ ನಡೆಯಲಿದೆ.

ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನೇತೃತ್ವ ವಹಿಸುವರು. 27 ರಂದು ಪೂರ್ವಾರಾಧನೆ ದಿನದಂದು ಸಂಜೆ 6 ಗಂಟೆಗೆ ‘ಶ್ರೀ ರಾಘವೇಂದ್ರಾನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ತಿರುಪತಿಯ ವಿದ್ವಾನ್‌ ಕೆ.ಇ.ದೇವನಾಥನ್‌, ಧಾರವಾಡದ ವಿದ್ವಾನ್‌ ಗೋವಿಂದಾಚಾರ್ಯ ವಿ.ನವಲಗುಂದ, ಸಾಮಾಜಿಕ ಕಳಕಳಿ ಹೊಂದಿರುವ ಬೆಂಗಳೂರಿನ ನ್ಯಾಯಮೂರ್ತಿ ಕೆ.ಶ್ರೀಧರರಾವ್‌, ಬಳ್ಳಾರಿಯ ಡಾ.ಬಿ.ಕೆ. ಶ್ರೀನಿವಾಸ ಮೂರ್ತಿ ಅವರು ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

28 ರಂದು ಮಧ್ಯಾರಾಧನೆ ದಿನದಂದು ಬೆಳಿಗ್ಗೆ 7.30 ಕ್ಕೆ ತಿರುಮಲ ತಿರುಪತಿ ದೇವಸ್ಥಾನ ವತಿಯಿಂದ ಶ್ರೀನಿವಾಸ ದೇವರ ಶೇಷವಸ್ತ್ರವನ್ನು ಮಠಕ್ಕೆ ಸಮರ್ಪಿಸಲಾಗುತ್ತದೆ. 29 ರಂದು ಉತ್ತರಾರಾಧನೆ ದಿನದಂದು ಮಂತ್ರಾಲಯದ ಮುಖ್ಯ ಬೀದಿಯಲ್ಲಿ ಬೆಳಿಗ್ಗೆ ಗುರುಸಾರ್ವಭೌಮರ ಮಹಾರಥೋತ್ಸವ ಜರುಗುವುದು. ವಿವಿಧ ಜಾನಪದ ಕಲಾತಂಡಗಳು, ವಾದ್ಯವೈಭವದೊಂದಿಗೆ ರಥೋತ್ಸವ ನೆರವೇರಿಸಲಾಗುತ್ತದೆ.

ಆರಾಧನಾ ಮಹೋತ್ಸವ ನಿಮಿತ್ತ ಆಗಸ್ಟ್‌ 25 ರಿಂದ ಸಪ್ತರಾತ್ರ್ಯೋತ್ಸವ ಕಾರ್ಯಕ್ರಮಗಳು ಆರಂಭವಾಗುತ್ತವೆ. ಪ್ರತಿದಿನ ನಸುಕಿನ 4 ರಿಂದ 8. 30 ರವರೆಗೂ ಉತ್ಸವ ರಾಯರ ಪಾದಪೂಜೆ ಮತ್ತು ಪಂಚಾಮೃತ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 2.30 ರವರೆಗೂ ಮೂಲ ರಘುಪತಿ ವೇದವ್ಯಾಸದೇವರ ಪೂಜೆ ಹಾಗೂ ಸಂಜೆ 5 ಗಂಟೆಗೆ ಸ್ವಸ್ತಿ ವಾಚನ ಮತ್ತು ಪ್ರಾಕಾರ ಉತ್ಸವ ನಡೆಯುವುದು. ಬೆಳಿಗ್ಗೆ 10 ರಿಂದ 12 ರವರೆಗೂ ಪ್ರವಚನ ಮಂಟಪದಲ್ಲಿ ವಿವಿಧ ವಿದ್ವಾಂಸರಿಂದ ಪ್ರವಚನ. ಸಂಜೆ 6 ರಿಂದ ರಾತ್ರಿ 10.30 ರವರೆಗೂ ನೃತ್ಯ ಸಂಗೀತ, ವಾದ್ಯ ಮೇಳ ಹಾಗೂ ದಾಸವಾಣಿ ನಡೆಯುವುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !