ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಸಿಡಿಸ್‌: ಎಸ್‌ ಶ್ರೇಣಿಯ ಹೊಸ ಕಾರ್‌ ಮಾರುಕಟ್ಟೆಗೆ

Last Updated 27 ಫೆಬ್ರುವರಿ 2018, 19:52 IST
ಅಕ್ಷರ ಗಾತ್ರ

ನವದೆಹಲಿ: ಜರ್ಮನಿಯ ವಿಲಾಸಿ ಕಾರ್ ತಯಾರಿಕಾ ಸಂಸ್ಥೆ   ಮರ್ಸಿಡಿಸ್ ಬೆಂಜ್, ತನ್ನ ಅತ್ಯಂತ ಉನ್ನತ ಶ್ರೇಣಿ ‘ಎಸ್-ಕ್ಲಾಸ್‍’ನ ನವೀಕೃತ ಆವೃತ್ತಿಯನ್ನು ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಡೀಸೆಲ್ ಚಾಲಿತ ಹೊಸ ‘ಎಸ್-ಕ್ಲಾಸ್ 350 ಡಿ’ ಭಾರತಕ್ಕಾಗಿ ಭಾರತದಲ್ಲಿಯೇ ತಯಾರಿಸಿದ ಕಾರ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದು ವಾಯು ಮಾಲಿನ್ಯ ನಿಯಂತ್ರಣ ‘ಭಾರತ್‌ 6’ ಮಾನದಂಡ ಒಳಗೊಂಡಿರುವ ಮೊದಲ ಡೀಸೆಲ್‌ ಕಾರ್‌ ಆಗಿದೆ. ಈ ನಿಯಮ ಜಾರಿಗೆ ಬರುವ ಎರಡು ವರ್ಷ ಮೊದಲೇ ಈ ಕಾರ್‌ನಲ್ಲಿ ಈ ನಿಬಂಧನೆ ಅಳವಡಿಸಲಾಗಿದೆ.

‘ಈ ಕಾರ್‌ನಲ್ಲಿ  ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯ ಅನೇಕ ಸೌಲಭ್ಯಗಳು ಇವೆ. ಸುರಕ್ಷತೆಯ ಬಗ್ಗೆ ಕಿಂಚಿತ್ತೂ ರಾಜಿ ಮಾಡಿಕೊಂಡಿಲ್ಲ. ಹೊಸ ಡೀಸೆಲ್ ಎಸ್ 350 ಡಿ ಮತ್ತು ಪೆಟ್ರೋಲ್ ಎಸ್ 450 ಕಾರ್‌ಗಳ ಬೆಲೆ ಕ್ರಮವಾಗಿ ₹ 1.33 ಕೋಟಿ ಮತ್ತು ₹ 1.37 ಕೋಟಿಯಿಂದ ಆರಂಭಗೊಳ್ಳುತ್ತದೆ’ ಎಂದು ಮರ್ಸಿಡಿಸ್ ಬೆಂಜ್ ಇಂಡಿಯಾದ ಸಿಇಒ ರೋಲ್ಯಾಂಡ್‌ ಫೋಲ್ಗರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT