ರಾಜ್ಯ ಸರ್ಕಾರಕ್ಕೆ ಬುದ್ಧಿಯಿಲ್ಲ: ಭೈರಪ್ಪ

7
ಕೊಡಗು ದುರಂತ: ತಮಿಳುನಾಡು ಸ್ಪಂದಿಸಬೇಕಿತ್ತು

ರಾಜ್ಯ ಸರ್ಕಾರಕ್ಕೆ ಬುದ್ಧಿಯಿಲ್ಲ: ಭೈರಪ್ಪ

Published:
Updated:
Deccan Herald

ಮೈಸೂರು: ಕೊಡಗಿನಲ್ಲಿ ಮಹಾಮಳೆಯಿಂದ ಉಂಟಾಗಿದ್ದ ನಷ್ಟ ಭರಿಸಲು ತಮಿಳುನಾಡು ಸರ್ಕಾರ ನೆರವಿನ ಹಸ್ತ ಚಾಚಬೇಕಿತ್ತು ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ಇಲ್ಲಿ ಮಂಗಳವಾರ ಅಭಿಪ್ರಾಯಪಟ್ಟರು.

‘ಭಾರತದ ಪ್ರಸ್ತುತ ಸಾಮಾಜಿಕ ಮತ್ತು ಪರಿಸರ ವಿದ್ಯಮಾನಗಳು’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊಡಗಿನಲ್ಲಿ ಮಳೆ ಬಂದರೆ ಹೆಚ್ಚು ನೀರು ಬಿಡಿ ಎಂದು ತಮಿಳುನಾಡಿನವರು ಕರ್ನಾಟಕವನ್ನು ಒತ್ತಾಯಿಸುತ್ತಾರೆ. ನ್ಯಾಯಾಲಯದ ಮೊರೆ ಹೋಗುತ್ತಾರೆ. ಕೊಡಗಿನಲ್ಲಿರುವ ಕಾಡುಗಳಿಂದಾಗಿ ಮಳೆ ಸುರಿಯುತ್ತದೆ. ಕಾವೇರಿ ನದಿ ಹರಿಯುತ್ತದೆ. ಆದರೆ ಅಲ್ಲಿ ಅನಾಹುತ ಸಂಭವಿಸಿದಾಗ ನೆರವು ನೀಡಲು ತಮಿಳುನಾಡು ಸರ್ಕಾರ ಮುಂದೆ ಬರಲಿಲ್ಲ ಎಂದು ಟೀಕಿಸಿದರು.

‘ಕರ್ನಾಟಕ ಸರ್ಕಾರ ಕೂಡಾ ಅವರಲ್ಲಿ ಪರಿಹಾರ ಕೇಳಲಿಲ್ಲ. ರಾಜ್ಯ ಸರ್ಕಾರಕ್ಕೆ ಈ ವಿಚಾರದಲ್ಲಿ ನಿಜವಾಗಿಯೂ ಬುದ್ಧಿಯಿಲ್ಲ. ಕೊಡಗಿನಲ್ಲಿ ಆಗಿರುವ ನಷ್ಟ ಭರಿಸಲು ನಾವು ಇಷ್ಟು ಹಣ ನೀಡುತ್ತೇವೆ. ತಮಿಳುನಾಡು ಇಂತಿಷ್ಟು ಹಣ ನೀಡಲಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕಿತ್ತು’ ಎಂದು ಹೇಳಿದರು.

ಹುಡುಗಾಟ ಅಲ್ಲ: ಪರಿಸರ ತಜ್ಞ ಡಾ.ಎ.ಎನ್‌.ಯಲ್ಲಪ್ಪರೆಡ್ಡಿ ಮಾತನಾಡಿ, ‘ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಿಸುವುದು ಹುಡುಗಾಟವಲ್ಲ. ಅಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬಾರದು. ಇರುವ ಒಂದಿಷ್ಟು ಅರಣ್ಯವನ್ನು ನಾಶ ಮಾಡಿದರೆ ಪ್ರಾಣಿಗಳು ಬದುಕುವುದು ಹೇಗೆ’ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !