ಭಾನುವಾರ, ಜನವರಿ 26, 2020
29 °C
ಸಾಹಿತಿ ಎಸ್‌.ಎಲ್.ಭೈರಪ್ಪ

ಶಿಕ್ಷಣ ಮಾಧ್ಯಮ, ಕನ್ನಡ ಇಂಗ್ಲಿಷ್ ಎರಡೂ ಇರಲಿ : ಸಾಹಿತಿ ಬೈರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಶಿಕ್ಷಣ ಮಾಧ್ಯಮ ವಿಷಯವಾಗಿ ಪರಿಹಾರವೊಂದನ್ನು ಸೂಚಿಸಿರುವ ಸಾಹಿತಿ ಎಸ್‌.ಎಲ್‌. ಭೈರಪ್ಪ, ಶಾಲಾ ಹಂತದಲ್ಲಿ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ಬೋಧನೆ ನಡೆಯಬೇಕು ಎಂದು ಸೋಮವಾರ ಇಲ್ಲಿ ಹೇಳಿದರು.

ಹಾ.ಮಾ.ನಾ ಪ್ರತಿಷ್ಠಾನ ಆಯೋಜಿಸಿದ್ದ ಉಪನ್ಯಾಸದಲ್ಲಿ ಮಾತನಾಡಿದ ಅವರು, ‘ಭಾಷಾ ವಿಷಯದಲ್ಲಿ ಏನನ್ನೂ ಮಾಡದಂತಹ ಸನ್ನಿವೇಶ ನಿರ್ಮಾಣವಾಗಿದೆ. ಮೊದಲು ರಾಜಕಾರಣಿಗಳಿಗೆ ಈ ವಿಷಯವನ್ನು ಮನದಟ್ಟು ಮಾಡಿಕೊಡಬೇಕಿದೆ. ನಾವು ಇಂಗ್ಲಿಷ್ ಬೇಡ ಅನ್ನಲ್ಲ. ನೀವೂ ಸಹ ಕನ್ನಡ ಬೇಡ ಎನ್ನಬಾರದು. ಈ ಮೂಲಕ ಭಾಷಾ ಮಾಧ್ಯಮ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳೋಣ’ ಎಂದರು.

‘ನಾಲ್ಕನೇ ತರಗತಿಯವರೆಗೂ ಆಯಾ ರಾಜ್ಯ ಭಾಷೆಯಲ್ಲೇ ಪಾಠ ನಡೆಯಬೇಕು. ಮಾಧ್ಯಮಿಕ ಶಾಲಾ ಹಂತದಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಬೋಧಿಸಿದರೆ, ಪ್ರೌಢಶಾಲಾ ಹಂತದಲ್ಲಿ ಎರಡೂ ಭಾಷೆಯಲ್ಲಿ ಪಾಠ ನಡೆಯಬೇಕು’ ಎಂಬ ಸಲಹೆ ನೀಡಿದರು.

‘45 ನಿಮಿಷದ ಅವಧಿಯಲ್ಲಿ 30 ನಿಮಿಷ ಕನ್ನಡದಲ್ಲಿ ಬೋಧಿಸಿ, ವಿದ್ಯಾರ್ಥಿಗೆ ಪಠ್ಯದ ವಿಷಯವನ್ನು ಮನದಟ್ಟು ಮಾಡಿಕೊಡಬೇಕು. ಉಳಿದ 15 ನಿಮಿಷದ ಅವಧಿಯಲ್ಲಿ ಇದೇ ವಿಷಯವನ್ನು ಇಂಗ್ಲಿಷ್‌ನಲ್ಲಿ ವಿವರಿಸಬೇಕು. ಒಂದೇ ತರಗತಿಯಲ್ಲಿ ಎರಡೂ ಭಾಷೆಯ ಬೋಧನೆ ನಡೆಯಬೇಕಿದೆ’ ಎಂದು ಭೈರಪ್ಪ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು