ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಜೋಡೆತ್ತುಗಳು, ಸಿದ್ದರಾಮಯ್ಯ ಮಠ ಸೇರಿಕೊಳ್ಳಬೇಕು: ಶ್ರೀರಾಮುಲು

Last Updated 23 ಮೇ 2019, 8:55 IST
ಅಕ್ಷರ ಗಾತ್ರ

ಬಳ್ಳಾರಿ:ನಿಂಬೆಕಾಯಿ ರೇವಣ್ಣ ಮಠ ಕಟ್ಟುತ್ತಿದ್ದಾರೆ ಅಂತ ಹೇಳ್ತಾರೆ, ರಾಜ್ಯದ ಜೋಡೆತ್ತುಗಳು ಸೇರಿದಂತೆ ಸಿದ್ದರಾಮಯ್ಯ ಕೂಡ ಆ ಮಠ ಸೇರಿಕೋಳ್ಳಲಿ ಎಂದು ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಮೋದಿಯವರು ಪ್ರಧಾನಿಯಾದರೇ ರಾಜಕೀಯ ನಿವೃತ್ತಿ ಪಡೆಯುತ್ತೇವೆ ಅಂತ ಹೇಳಿದ್ದರು, ದೇವೆಗೌಡರು ಕೂಡ ಹೇಳಿದ್ದರು, ಈ ಕೂಡಲೇ ಅವರು ನಿವೃತ್ತಿ ಪಡೆಯಲಿ ಎಂದು ಶ್ರೀರಾಮುಲು ಹೇಳಿದರು.

ಈ ರಾಜ್ಯ ಸರಕಾರ ಬಹಳ ದಿನಗಳ ಕಾಲ ಉಳಿಯುವುದಿಲ್ಲ, ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಬಿ.ಎಸ್‌. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡುತ್ತಾರೆ ಎಂದು ಶ್ರೀರಾಮುಲು ಹೇಳಿದರು.

ಚಿಂಚೋಳಿಯಲ್ಲಿ ನಾವು ಗೆದ್ದಿದ್ದೇವೆ ಈಗ ನಾವು 110 ಶಾಸಕರಿದ್ದೇವೆ, ಪಕ್ಷೇತರರ ಜೊತೆಗೂಡಿ ನಾವು ಸರಕಾರ ರಚನೆ ಮಾಡಲು ಸಮರ್ಥರಿದ್ದೇವೆ. ಸೋಲಿನ ನೈತಿಕ ಹೊಣೆ ಹೊತ್ತು ಈಗಿನ ಸರ್ಕಾರ ರಾಜೀನಾಮೆ ಕೊಟ್ಟು ನಮಗೆ ಸರ್ಕಾರ ರಚನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅವರು ಹೇಳಿದರು.

ಡಿಕೆಶಿ, ಸಿದ್ದರಾಮಯ್ಯ ಅವರೇ ನಮ್ಮ ಜಿಲ್ಲೆಯ ಜನರ ಜೋಶ್ ಹೇಗಿದೆ ನೀವು ಮುಟ್ಟಿ, ಮುಟ್ಟಿ ನೋಡ್ಕೋಳಿ- ರೇವಣ್ಣನವರೇ ನಿಮ್ಮ ಮಾತಿನ ಮೇಲೆ ನಿಲ್ಲೋದಾದ್ರೆ, ಮೊದಲು ರಾಜೀನಾಮೆ ಕೊಡಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT