ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದರಬೇಡಿ, ನಾನೂ ಫೇಲಾದ ವಿದ್ಯಾರ್ಥಿ!

Last Updated 1 ಮೇ 2019, 10:46 IST
ಅಕ್ಷರ ಗಾತ್ರ

ಹಾವೇರಿ:ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ತಕ್ಷಣವೇ ಎಲ್ಲರ ಚಿತ್ತ ಹೆಚ್ಚಿನ ಅಂಕ ಪಡೆದವರತ್ತ ಹೊರಳಿದರೆ, ಹಾನಗಲ್‌ನ ವಕೀಲರಾದ ವಿನಾಯಕ ಕುರುಬರ, ‘ಎಸ್ಸೆಸ್ಸೆಲ್ಸಿ ಪೇಲಾದ ವಿದ್ಯಾರ್ಥಿಗಳೇ ಹೆದರಬೇಡಿ, ನಾನೂ ಪೇಲಾದ ವಿದ್ಯಾರ್ಥಿ’ ಎಂದು ಫೇಸ್‌ಬುಕ್‌ನಲ್ಲಿ ಹಾಕುವ ಮೂಲಕ ಆತ್ಮಸ್ಥೈರ್ಯ ಮೂಡಿಸಲು ಯತ್ನಿಸಿದ್ದಾರೆ.

ಇದಕ್ಕೆ ಈಗಾಗಲೇ ಸುಮಾರು 80 ಲೈಕ್‌ಗಳು ಹಾಗೂ ಹಲವಾರು ಕಮೆಂಟ್‌ಗಳು ಬಂದಿವೆ. ಕೆಲವರು ‘ನಾನೂ ಕೂಡಾ’ ಎಂದು ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಎಸ್ಸೆಸ್ಸೆಲ್ಸಿ ಫೇಲಾಗಿದ್ದ ಸಚಿನ್ ಮತ್ತಿತರ ದಿಗ್ಗಜರ ಹೆಸರು ಉಲ್ಲೇಖಿಸಿದ್ದಾರೆ. ಆ ಮೂಲಕ ಅನುತ್ತೀರ್ಣ ಹೊಂದಿದವರಿಗೆ ಧೈರ್ಯ ತುಂಬಲು ಯತ್ನಿಸಿದ್ದಾರೆ.

‘2002ರಲ್ಲಿ ನಾನು ಎಸ್ಸೆಸ್ಸೆಲ್ಸಿ ಫೇಲಾದೆನು. ನನಗೆ ಗಣಿತ ಕಬ್ಬಿಣದ ಕಡಲೆಯಾಗಿತ್ತು. ಆದರೆ, ಮನೆ ಹಾಗೂ ಬಳಗದವರು ಯಾರೂ ನಿಂದಿಸಲಿಲ್ಲ. ಹೀಗಾಗಿ, ಪೂರಕ ಪರೀಕ್ಷೆ ಬರೆದು ತೇರ್ಗಡೆಯಾದೆನು. ಅನಂತರ ಅಥಣಿಯಲ್ಲಿ ಕಲಾ ವಿಭಾಗದಲ್ಲಿ ಪಿಯು ಪೂರೈಸಿದೆ. ಕಲಾ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ, ಎಲ್‌ಎಲ್‌ಬಿ ಪೂರೈಸಿದೆನು’ ಎಂದು ವಿನಾಯಕ ಕುರುಬರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಹಾನಗಲ್‌ನಲ್ಲಿ ವಕೀಲನಾಗಿದ್ದು, ಎಐಟಿಯುಸಿ ಕಾರ್ಯದರ್ಶಿಯಾಗಿ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಯಾರೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಫೇಲಾದರೆ, ಮತ್ತೊಂದು ಅವಕಾಶವಿದೆ. ಛಲದಿಂದ ಗೆದ್ದು ನಿಲ್ಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT