ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎಫ್‌ ಯೋಧನ ಪುತ್ರಿಗೆ ಪ್ರಥಮ ರ್‍ಯಾಂಕ್

Last Updated 30 ಏಪ್ರಿಲ್ 2019, 8:46 IST
ಅಕ್ಷರ ಗಾತ್ರ

ಕಾರವಾರ: ಬಿಎಸ್ಎಫ್‌ನ ನಿವೃತ್ತ ಯೋಧನ ಮಗಳು ಈ ಬಾರಿಯ ಎಸ್ಎಸ್ಎಲ್‌‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಕುಮಟಾದ ಕೊಲಬಾ ವಿಠೋಬಾ ಶಾನಭಾಗ ಕಲಭಾಗಕರ್ ಹೈಸ್ಕೂಲ್ ನ (ಸಿವಿಎಸ್‌ಕೆ) ವಿದ್ಯಾರ್ಥಿನಿ ನಾಗಾಂಜಲಿ ನಾಯ್ಕ 625ಕ್ಕೆ 625 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾಳೆ.

ನಾಗಾಂಜಲಿ, ಪರಮೇಶ್ವರ ನಾಯ್ಕ ಹಾಗೂ ಚೇತನಾ ನಾಯ್ಕ ದಂಪತಿಯ ಪುತ್ರಿ. ಪರಮೇಶ್ವರ ಅವರು ಬಿಎಸ್ಎಫ್ ನಲ್ಲಿ ಸೇವೆ ಸಲ್ಲಿಸಿ, 2006ರಲ್ಲಿ ನಿವೃತ್ತಿ ಪಡೆದರು. ತದನಂತರ ಕಳೆದ ಹತ್ತು ವರ್ಷಗಳಿಂದ ಸ್ವಂತ ಟೆಂಪೊವೊಂದನ್ನು ಇಟ್ಟುಕೊಂಡು, ಬಾಡಿಗೆಗೆ ಬಿಡುತ್ತಿದ್ದಾರೆ.

'ನಾಗಾಂಜಲಿ ಬಹಳ ಶ್ರಮ ಪಡುವವಿದ್ಯಾರ್ಥಿನಿ. ಆಕೆಗೆ ರ್‍ಯಾಂಕ್‌ ಬರುತ್ತದೆ ಎಂಬ ವಿಶ್ವಾಸ ನಮಗೂ ಹಾಗೂ ಅವಳಿಗೂ ಇತ್ತು. ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಹಳ ಕೂಲಂಕಷವಾಗಿ ಅಧ್ಯಯನ ಮಾಡಿದ್ದಳು. ತುಂಬಾ ಮುಗ್ದೆ ಹಾಗೂ ವಿಧೇಯಕ ವಿದ್ಯಾರ್ಥಿನಿ' ಎನ್ನುವುದು ಶಾಲೆಯ ಮುಖ್ಯ ಶಿಕ್ಷಕಿ ಸುಮಾ ಪ್ರಭು ಅವರ ಅಭಿಪ್ರಾಯ.

'ಶಾಲೆಯಲ್ಲಿ ಪ್ರತಿವರ್ಷ 90ಕ್ಕೂ ಅಧಿಕ ಮಕ್ಕಳು ಡಿಸ್ಟಿಂಕ್ಷನ್ ಬರುತ್ತಿದ್ದರು. ಶೇ 70 ನಮ್ಮಲ್ಲಿ ಕನಿಷ್ಠ ಅಂಕ. ಈ ಬಾರಿ 129 ಮಕ್ಕಳು ಪರೀಕ್ಷೆ ಬರೆದಿದ್ದರು' ಎಂದು ತಿಳಿಸಿದರು.

http://sslc.kar.nic.inಮತ್ತುhttp://karresults.nic.inವೆಬ್‌ಸೈಟ್‌ನಲ್ಲಿ ಫಲಿತಾಂಶ ಪಡೆಯಬಹುದಾಗಿದೆ. ಮೇ 1ರಂದು ಸಾರ್ವಜನಿಕ ರಜೆ ಇರುವುದರಿಂದ ಇಂದೇ ಮಧ್ಯಾಹ್ನ 3ಗಂಟೆಗೆ ಶಾಲೆಯಲ್ಲಿಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT