ಶನಿವಾರ, ಜನವರಿ 18, 2020
21 °C

ರಾಜ್ಯ ಬಿಜೆಪಿ ಮುಖಂಡರಿಗೆ ಉನ್ನತ ಸ್ಥಾನ ದೊರೆಯುತ್ತಿಲ್ಲ: ಡಿ.ಎಚ್.ಶಂಕರಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ರಾಜ್ಯ ಬಿಜೆಪಿ ಮುಖಂಡರಿಗೆ 6 ವರ್ಷಗಳಿಂದ ಯಾವುದೇ ಉನ್ನತ ಸ್ಥಾನಗಳು ಲಭಿಸಿಲ್ಲ. ರಾಮಾ ಜೋಯಿಸ್ ಅವರ ನಂತರ ಕರ್ನಾಟಕದ ಒಬ್ಬರೂ ರಾಜ್ಯಪಾಲರ ಹುದ್ದೆ ಅಲಂಕರಿಸಿಲ್ಲ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅಸಮಾಧಾನ ಹೊರಹಾಕಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನ ಗೆದ್ದಿದೆ. ಕೇಂದ್ರದಲ್ಲಿ ಎರಡನೇ ಬಾರಿ ಸ್ಪಷ್ಟಬಹುಮತ ಪಡೆದು ಅಧಿಕಾರಕ್ಕೇರಿದೆ. ಉಪ ಚುನಾವಣೆಯಲ್ಲಿ ಜಯಭಾರಿ ಭಾರಿಸಿದೆ. ಇಷ್ಟಾದರೂ ರಾಜ್ಯದವರಿಗೆ ಸೂಕ್ತ ಸ್ಥಾನ ದೊರೆತಿಲ್ಲ. ತಾವೂ ರಾಜ್ಯಪಾಲರ ಹುದ್ದೆ ಅಲಂಕರಿಸುವ ಕುರಿತು ಸುದ್ದಿ ಹರಡಿತ್ತು. ಅದು ನಿಜವಾಗಲಿಲ್ಲ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

ಪೌರತ್ವ ಕಾಯ್ದೆ ವಿರೋಧಿಸುವ ಮೂಲಕ ಕಾಂಗ್ರೆಸ್‌ ಧರ್ಮದ್ರೋಹ, ದೇಶದ್ರೋಹದ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಸೇರಿದಂತೆ ಎಲ್ಲರೂ ಸೇರಿ ಭಾರತ ಕಟ್ಟಿದ್ದಾರೆ. ಬೆಳೆಸಿದ್ದಾರೆ. ಈಗ ವಿಷಯದ ಅರ್ಥ ಮಾಡಿಕೊಳ್ಳದೇ ಪ್ರಚೋದನೆ ನೀಡುತ್ತಿದ್ದಾರೆ. ಹಿಂಸೆ ಪ್ರೋತ್ಸಾಹಿಸುತ್ತಿದ್ದಾರೆ. ಹಾಗೆ ನೋಡಿದರೆ ಭಾರತದ ಮುಸ್ಲಿಮರಿಗೆ ಈ ಕಾಯ್ದೆ ನ್ಯಾಯ ಒದಗಿಸಿದೆ. ವಿದೇಶದ ಮುಸ್ಲಿಮರಿಗೆ ಅವಕಾಶ ನಿರಾಕರಿಸಿದೆ ಎಂದು ಸಮರ್ಥಿಸಿಕೊಂಡರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು