ಉಡುಪಿ: ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎಸ್.ಸುಚೇತಾ ಎಂಬ ವಿದ್ಯಾರ್ಥಿನಿ ಭಾನುವಾರ ಆಂಬುಲೆನ್ಸ್‌ನಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದು ನೀಟ್ ಪರೀಕ್ಷೆ ಬರೆದರು. ಪರೀಕ್ಷೆ ಮುಗಿಸಿ ಆಂಬುಲೆನ್ಸ್‌ನಲ್ಲಿಯೇ ಆಸ್ಪತ್ರೆಗೆ ಮರಳಿದರು.
ಸುಚೇತಾ ಕುಂದಾಪುರದ ಎಕ್ಸ್‌ಲೆಂಟ್ ಕಾಲೇಜು ವಿದ್ಯಾರ್ಥಿನಿ. ಹೊನ್ನಾವರದ ಮಂಕಿಯ ಸುರೇಶ್ ನಾಯಕ್ ಅವರ ಪುತ್ರಿ. ಮೇ 1ರಂದುಬ್ರಹ್ಮಾವರದ ಚೇರ್ಕಾಡಿ ಬಳಿ ಸುಚೇತಾಗೆ ಅಪಘಾತವಾಗಿ, ಕಾಲಿನ ಮೂಳೆ ಮುರಿದಿತ್ತು. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.
ನೀಟ್ ಪರೀಕ್ಷೆ ಬರೆಯಲೇಬೇಕು ಎಂದು ಪಟ್ಟುಹಿಡಿದ ಸುಚೇತಾಗೆ ಆಸ್ಪತ್ರೆಯಿಂದ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಯಿತು. ಮಣಿಪಾಲದಲ್ಲಿರುವ ಮಾಧವ ಕೃಪಾ ಪರೀಕ್ಷಾ ಕೇಂದ್ರದ ಸಿಬ್ಬಂದಿಯೂ ಅನುಕೂಲಕ್ಕೆ ತಕ್ಕಂತೆ ಪರೀಕ್ಷೆ ಬರೆಯಲು ನೆರವು ನೀಡಿದರು.
ಬಳಿಕ ಮಾತನಾಡಿದ ಸುಚೇತಾ, ‘ನೀಟ್ ಪರೀಕ್ಷೆಗೆ ಅಗತ್ಯ ತಯಾರಿ ಮಾಡಿಕೊಂಡಿದ್ದೆ. ದುರದೃಷ್ಟವಶಾತ್ ಅಪಘಾತವಾಯಿತು. ದೇವರ ದಯೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಯಿತು’ ಎಂದು ಸಂತಸ ವ್ಯಕ್ತಪಡಿಸಿದರು.
ಸುಚೇತಾ ಜತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅನಘ ಎಂಬ ವಿದ್ಯಾರ್ಥಿನಿಯೂ ಪೋಷಕರ ಜತೆಯಲ್ಲಿ ಬಂದು ಮಾಧವ ಕೃಪ ಶಾಲೆಯಲ್ಲಿ ಪರೀಕ್ಷೆ ಬರೆದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.