ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಬೇಸಿಗೆ ಮಳೆ

ಗುರುವಾರ , ಏಪ್ರಿಲ್ 25, 2019
33 °C

ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಬೇಸಿಗೆ ಮಳೆ

Published:
Updated:
Prajavani

ಕಾರವಾರ/ ಶಿರಸಿ: ಪ್ರಖರ ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯ ವಿವಿಧೆಡೆ ಸೋಮವಾರ ಸಂಜೆ ಸುರಿದ ಮಳೆ ತಂಪೆರೆಯಿತು. ಶಿರಸಿಯಲ್ಲಿ 20 ನಿಮಿಷ ಗುಡುಗು, ಸಿಡಿಲಿನೊಂದಿಗೆ ರಭಸದ ಮಳೆ‌ ಸುರಿಯಿತು. ತಣ್ಣನೆಯ ಗಾಳಿ ಬೀಸಿ ಸೆಕೆ ಕಡಿಮೆಯಾಯಿತು. ಹನಿಗಳಿಗೆ ಮೈಯೊಡ್ಡಿದ ಜನರು ಅಕಾಲಿಕ ಮಳೆಯಲ್ಲಿ ಸಂಭ್ರಮಿಸಿದರು. 

ಮುಂಡಗೋಡ ತಾಲ್ಲೂಕಿನ ಮೈನಳ್ಳಿ, ಗುಂಜಾವತಿ, ಉಗ್ಗಿನಕೇರಿ, ಇಂದೂರ, ನಂದಿಗಟ್ಟಾ, ಸನವಳ್ಳಿ ಪ್ಲಾಟ್‌, ಹುನಗುಂದ, ಮುಂಡಗೋಡ ಪಟ್ಟಣ ಸೇರಿದಂತೆ ಹಲವೆಡೆ ಅರ್ಧ ಗಂಟೆ ತುಂತುರು ಮಳೆ ಬಂತು. ನೆತ್ತಿ ಸುಡುತ್ತಿದ್ದ ಮಧ್ಯಾಹ್ನ ಏಕಾಏಕಿ ರಭಸದ ಗಾಳಿ ಬೀಸಿ ಆಕಾಶವಿಡೀ ಕರಿಮೋಡಗಳಿಂದ ತುಂಬಿಕೊಂಡಿತು. ಬೆಳಿಗ್ಗೆಯಿಂದ ಇದ್ದ ವಾತಾವರಣ ಅರ್ಧ ಗಂಟೆಯಲ್ಲಿ ಬದಲಾಗಿತ್ತು. ಆಗಾಗ ಗುಡುಗಿನ ಶಬ್ದ ಕೇಳುತ್ತಿತ್ತು.

ಹಳಿಯಾಳ, ದಾಂಡೇಲಿ, ಯಲ್ಲಾಪುರ ತಾಲ್ಲೂಕುಗಳ ವಿವಿಧೆಡೆಯೂ ತುಂತುರು ಮಳೆಯಾಯಿತು. ರಭಸದ ಗಾಳಿಯೂ ಬೀಸಿ ಸ್ವಲ್ಪ ಆತಂಕ ಸೃಷ್ಟಿಸಿತ್ತು. ಹಳಿಯಾಳ ತಾಲ್ಲೂಕಿನ ಮುರ್ಕವಾಡದಲ್ಲಿ ಮರವೊಂದು ರಸ್ತೆ ಬಿದ್ದಿತ್ತು. ಅದೃಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ. 

ಕರಾವಳಿ ಭಾಗದಲ್ಲಿ ಸೋಮವಾರ ಸೆಕೆ ಹೆಚ್ಚಿತ್ತು. ಮಧ್ಯಾಹ್ನದ ವೇಳೆಗೆ ಮನೆಯಿಂದ ಹೊರಬರಲು ಹಿಂದೇಟು ಹಾಕುವ ರೀತಿಯಲ್ಲಿ ಬಿಸಿಲಿತ್ತು. ಬೆಳಿಗ್ಗೆ ಮತ್ತು ಸಂಜೆ ಅಲ್ಲಲ್ಲಿ ಮೋಡ ಕವಿದ ವಾತಾವರಣವಿತ್ತು.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !