ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ‘ಜನತಾ ಕರ್ಫ್ಯೂ’: ಏನೇನು ಸೇವೆಗಳು ಲಭ್ಯ? ಏನಿರಲ್ಲ? ಇಲ್ಲಿದೆ ಮಾಹಿತಿ

Last Updated 21 ಮಾರ್ಚ್ 2020, 3:07 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವೈರಸ್‌ ಹರಡುವಿಕೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ‘ಜನತಾ ಕರ್ಫ್ಯೂ’ಗೆ ರಾಜ್ಯದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುವ ನಿರೀಕ್ಷೆ ಇದೆ. ಭಾನುವಾರ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ರಾಜ್ಯದಲ್ಲಿ ಜನಸಂಚಾರ, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಏನೇನು ಸೇವೆಗಳು ಲಭ್ಯವಿರಲಿವೆ? ಯಾವ ಸೇವೆಗಳು ದೊರೆಯುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.

ಏನೇನು ಇರುತ್ತೆ?

ಆಸ್ಪತ್ರೆಗಳು

ಔಷಧಿ ಮಳಿಗೆಗಳು

ಅಗ್ನಿಶಾಮಕ ದಳ

ಆಂಬುಲೆನ್ಸ್

ಬಂಕ್‌ಗಳು

ಹಾಲು

ದರ್ಶಿನಿ

ಏನೇನು ಇರಲ್ಲ?

ಮಾರುಕಟ್ಟೆ

ಕ್ಯಾಬ್‌ಗಳು, ಆಟೊ

ಸರಕು ಸಾಗಣೆ ವಾಹನಗಳು

ಹೋಟೆಲ್, ರೆಸ್ಟೊರೆಂಟ್

ಇಂದಿರಾ ಕ್ಯಾಂಟೀನ್

ಮೆಟ್ರೊ ಮತ್ತು ಬಸ್

ಹೋಟೆಲ್‌ನಿಂದ ಪಾರ್ಸೆಲ್‌ಗೆ ಮಾತ್ರ ಅವಕಾಶ

ರಾಜ್ಯದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿರುವ ಹೋಟೆಲ್‌ಗಳು ಶನಿವಾರದಿಂದ ಮಾರ್ಚ್‌ 31ರ ವರೆಗೆ ಪಾಕಶಾಲೆಯನ್ನು ಮಾತ್ರ ತೆರೆಯಬೇಕು ಮತ್ತು ಪಾರ್ಸೆಲ್‌ ಒಯ್ಯಲು ಅವಕಾಶ ನೀಡಬೇಕು ಎಂದು ಆರೋಗ್ಯ ಇಲಾಖೆ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT