ಮಂಗಳವಾರ, ಆಗಸ್ಟ್ 20, 2019
23 °C

ಸ್ಪೀಕರ್ ಎಚ್ಚರಿಕೆಯ ನಡೆ: ಸುಪ್ರೀಂಕೋರ್ಟ್‌ನಿಂದ ಕಲಾಪದ ಮೇಲೆ ನಿಗಾ

Published:
Updated:

ಬೆಂಗಳೂರು: ಸುಪ್ರೀಂಕೋರ್ಟ್ ಇಂದಿನ ಕಲಾಪವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಸ್ಪೀಕರ್ ಅವರು ಇಂದು ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕು. ಇಲ್ಲವಾದರೆ ಅವರು ಸಹ ಸಂಕಷ್ಟಕ್ಕೆ ಸಿಲುಕಬಹುದು ಎಂದು ವಿಧಾನಸೌಧದಲ್ಲಿ ಆಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು.

ಸೋಮವಾರವೇ ವಿಶ್ವಾಸಮತ ಗೊತ್ತುವಳಿಯನ್ನು ಮತಕ್ಕೆ ಹಾಕುವುದಾಗಿ ಸಭಾಧ್ಯಕ್ಷರು ಸದನಕ್ಕೆ ಭರವಸೆ ನೀಡಿದ್ದರು. ಅದರಿಂದಾಗಿಯೇ ಸುಪ್ರೀಂಕೋರ್ಟ್ ಸೋಮವಾರ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರ ಅರ್ಜಿಗಳನ್ನು ಕೈಗೆತ್ತಿಕೊಂಡಿರಲಾರದು ಎಂದು ಅವರು ಅಭಿಪ್ರಾಯಪಟ್ಟರು.

ಒಂದು ಗಂಟೆ ವಿಳಂಬವಾಗಿ ಕಲಾಪ ಆರಂಭವಾಯಿತು. ಸಿದ್ದರಾಮಯ್ಯ ಅವರು ಮಂಡಿಸಿದ ಕ್ರಿಯಾಲೋಪ ಕುರಿತು ಸಭಾಧ್ಯಕ್ಷರು ರೂಲಿಂಗ್ ನೀಡಿದರು. ಸುಪ್ರೀಂಕೋರ್ಟ್‌ನ ಅನಿಸಿಕೆ ನನಗೆ ಅನ್ವಯಿಸುವುದಿಲ್ಲ. ಶಾಸಕರಿಗೆ ರಕ್ಷಣೆ ಕೊಡುವುದು ನನ್ನ ಜವಾಬ್ದಾರಿ. ಶಾಸಕಾಂಗ ಪಕ್ಷದ ನಾಯಕರ ಅಧಿಕಾರ ಮೊಟಕುಗೊಳಿಸುವುದಿಲ್ಲ ಎಂದು ರಮೇಶ್‌ ಕುಮಾರ್ ಹೇಳಿದರು.

Post Comments (+)