ಮಂಗಳವಾರ, ಆಗಸ್ಟ್ 11, 2020
27 °C

₹ 10 ಲಕ್ಷ ಲಂಚ: ಸರ್ವೇಯರ್ ಬಂಧಿಸಿದ ಎಸಿಬಿ ಅಧಿಕಾರಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ನಿವಾಸಿಯೊಬ್ಬರಿಗೆ ಹಂಚಿಕೆಯಾಗಿದ್ದ ನಿವೇಶನವನ್ನು‌‌ ಮರು ಹಂಚಿಕೆ ಮತ್ತು ಮರು ಮಂಜೂರಾತಿ ಮಾಡಿಕೊಡಲು ₹10 ಲಕ್ಷ ಲಂಚ ಪಡೆದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆರ್ ಆ್ಯಂಡ್ ಆರ್ ವಿಭಾಗದ ಸರ್ವೇಯರ್ ಮತ್ತು  ಅವರಿಗೆ 
ಸಹಕಾರ ನೀಡಿದ್ದ ಮಧ್ಯವರ್ತಿಯನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.‌ 

ಆರೋಪಿ‌ ಸರ್ವೇಯರ್ ಬಸವರಾಜು ತಮ್ಮ ಮಧ್ಯವರ್ತಿ  ಬಸವರಾಜ್ ಮೂಲಕ ₹ 5 ಲಕ್ಷ ನಗದು ಮತ್ತು  ಉಳಿದ ₹ 5 ಲಕ್ಷದ ಮೊತ್ತಕ್ಕೆ ಚೆಕ್ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.

ಈ‌ ಚೆಕ್ ಅನ್ನು ಹಣ ತಲುಪಿಸಿದ 7 ದಿನಗಳಲ್ಲಿ ವಾಪಸ್‌‌‌ ಕೊಡುವುದಾಗಿ ಬಂಧಿತರು ಹೇಳಿದ್ದರು.

 ಎಸಿಬಿ‌ ಐಜಿ‌ ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು