ಸೋಮವಾರ, ಜೂಲೈ 13, 2020
28 °C

ತಬ್ಲೀಗ್ ಸಮಾವೇಶಕ್ಕೆ ಅವಕಾಶ ಕೊಟ್ಟವರು ಯಾರು: ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕು ತಬ್ಲೀಗ್ ಸದಸ್ಯರಿಂದ ಹರಡುತ್ತಿದೆ ಎಂದು ಆರೋಪಿಸುವುದರಲ್ಲಿ ಅರ್ಥವಿಲ್ಲ. ತಬ್ಲೀಗ್ ಸಮಾವೇಶ ನಡೆಸಲು ಅವಕಾಶ ಕೊಟ್ಟವರು ಯಾರು ಎಂದು ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಅಮೆರಿಕ, ಇಟಲಿಯಂತಹ ದೇಶಗಳಲ್ಲಿ ತಬ್ಲೀಗ್ ಸದಸ್ಯರಿದ್ದಾರೆಯೇ? ಅಲ್ಲಿ ಏಕೆ ಸೋಂಕು ಹರಡಿದೆ? ತಬ್ಲೀಗ್ ಸದಸ್ಯರ ವಿಚಾರದಲ್ಲಿ ರಾಜಕೀಯ ಮಾಡಲಾಗುತ್ತಿದೆ' ಎಂದು ಆರೋಪಿಸಿದರು.

ಸರ್ಕಾರ ಕೊರೊನಾ ನಿಭಾಯಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ವ ಪಕ್ಷ ಸಭೆ ನಡೆಸಬೇಕು ಎಂದು ಒತ್ತಾಯಿಸಿದ ಮೇಲೆ ನಮ್ಮನ್ನು ಕರೆಸಿದರು. ನಾವು ಕಾರ್ಮಿಕರ ಬಸ್ ಟಿಕೆಟ್ ದರ ಕೊಡ್ತೇವೆ ಎಂದ ಮೇಲೆ ಸರ್ಕಾರ ಉಚಿತವಾಗಿ ಕಾರ್ಮಿಕರನ್ನು ಕರೆದೊಯ್ದಿದೆ. ಅಸಂಘಟಿತ ಕುಲಕಸುಬುದಾರರಿಗೆ ನೆರವು ನೀಡಲು ಸಹ ನಾವು ಹಾಕಿದ ಒತ್ತಡವೇ ಕಾರಣ ಎಂದರು.

ಇದನ್ನೂ ಓದಿ: ಎಪಿಎಂಸಿ ಕಾಯ್ದೆ ತಿದ್ದುಪಡಿ ಹಿಂದೆ ಕಂಪನಿಗಳ ಲಾಭದ ಉದ್ದೇಶ: ಸಿದ್ದರಾಮಯ್ಯ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು