ತಮಿಳುನಾಡಿಗೆ ಪೂರ್ಣ ಹರಿದ ‘ಕಾವೇರಿ’!

7
ಮೆಟ್ಟೂರಿಗೆ ನಿಗದಿಗಿಂತ ಮೂರು ಪಟ್ಟು ಹೆಚ್ಚು ನೀರು

ತಮಿಳುನಾಡಿಗೆ ಪೂರ್ಣ ಹರಿದ ‘ಕಾವೇರಿ’!

Published:
Updated:

ಬೆಂಗಳೂರು: ತಮಿಳುನಾಡಿಗೆ ವರ್ಷಪೂರ್ತಿ ಬಿಡುಗಡೆ ಮಾಡಬೇಕಾದ ಕಾವೇರಿ ನೀರು ಮೂರೂವರೆ ತಿಂಗಳ ಒಳಗೇ ಹರಿದು ಹೋಗಿದೆ!

ಆದರೆ, ಈ ವರ್ಷ 12 ತಿಂಗಳಲ್ಲಿ ಹರಿಸಬೇಕಾದ ನೀರು ಮೂರೇ ತಿಂಗಳಲ್ಲಿ ಹರಿದಿರುವುದರಿಂದ ಮುಂದಿನ ತಿಂಗಳುಗಳಲ್ಲಿ ನಿಗದಿಯಂತೆ ನೀರು ಬಿಡುಗಡೆ ಮಾಡಬೇಕಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ’ ಎಂದು ಕಾವೇರಿ ನೀರಾವರಿ ನಿಗಮದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸಾಮಾನ್ಯ ಜಲವರ್ಷದಲ್ಲಿ ತಮಿಳುನಾಡಿಗೆ ಕಾವೇರಿಯಿಂದ ಹರಿಸಬೇಕಾದ 192 ಟಿಎಂಸಿ ಅಡಿ ನೀರಿನ ಪ್ರಮಾಣವನ್ನು ರಾಜ್ಯ ಸರ್ಕಾರದ ವಿಶೇಷ ಮೇಲ್ಮನವಿಯ ಮೇಲಿನ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ 177.25 ಟಿಎಂಸಿ ಅಡಿಗೆ ಇಳಿಸಿತ್ತು. ಕರ್ನಾಟಕ– ತಮಿಳುನಾಡು ಗಡಿಯಲ್ಲಿರುವ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಸೋಮವಾರದವರೆಗೆ (ಆ.13) 187.30 ಟಿಎಂಸಿ ಅಡಿ ಮೆಟ್ಟೂರು ಜಲಾಶಯ ಸೇರಿರುವುದು ದಾಖಲಾಗಿದೆ.

‘ಜೂನ್‌ನಿಂದ ಮೇ ವರೆಗೆ, ಪ್ರತಿ ತಿಂಗಳು ತಮಿಳುನಾಡಿಗೆ ಹರಿಸಬೇಕಾದ ಒಟ್ಟು ನೀರಿನ ಪ್ರಮಾಣವನ್ನು ಸುಪ್ರೀಂಕೋರ್ಟ್‌ ನಿಗದಿಪಡಿಸಿದೆ. ತಮಿಳುನಾಡಿಗೆ ಒಟ್ಟು ಹರಿಸಬೇಕಾದ ನೀರಿನ ಪ್ರಮಾಣಕ್ಕಿಂತಲೂ 10 ಟಿಎಂಸಿ ಅಡಿಗಿಂತಲೂ ಹೆಚ್ಚು ನೀರು ಈಗಾಗಲೇ ಹರಿದು ಹೋಗಿದೆ. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್‌ ನಿಗದಿಪಡಿಸಿದ ಪ್ರಕಾರ, ಜೂನ್‌ನಿಂದ ಆಗಸ್ಟ್‌ 13ರವರೆಗೆ 59.70 ಟಿಎಂಸಿ ಅಡಿ ನೀರು ಹರಿಸಬೇಕಿತ್ತು. ಆದರೆ, ಅದರ ಮೂರು ಪಟ್ಟು ಹೆಚ್ಚು ನೀರು ಮೆಟ್ಟೂರು ಜಲಾಶಯದ ಒಡಲು ಸೇರಿದೆ.

ಮುಂಗಾರು ಹಂಗಾಮಿನಲ್ಲಿ ಸುರಿದ ಉತ್ತಮ ಮಳೆಯಿಂದ ಕೆಆರ್ಎಸ್‌, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಜಲಾಶಯಗಳು ತುಂಬಿವೆ.

**

‘ನೀರು ಕೊಡಬೇಕಿಲ್ಲ’

‘ಒಂದು ತಿಂಗಳು ಹೆಚ್ಚು ನೀರು ಬಿಡುಗಡೆ ಮಾಡಿದರೆ ಅದನ್ನು ನಂತರದ ತಿಂಗಳುಗಳಿಗೆ ಲೆಕ್ಕಕ್ಕೆ ತೆಗೆದುಕೊಳ್ಳಬೇಕು ಎನ್ನುವುದು ನಮ್ಮ ವಾದ. ಈ ವರ್ಷ ತಮಿಳುನಾಡಿಗೆ ತಿಂಗಳುವಾರು ನಿಗದಿಪಡಿಸಿದ ನೀರು ಕೊಡುವ ಅಗತ್ಯ ಬರುವುದಿಲ್ಲ. ಜೂನ್‌ನಲ್ಲಿ 3 ಟಿಎಂಸಿ ಅಡಿಗೂ ಹೆಚ್ಚು ನೀರು ಹರಿದುಹೋಗಿದೆ. ಅದನ್ನು ಜುಲೈ ತಿಂಗಳಿಗೆ ಲೆಕ್ಕಕ್ಕೆ ತೆಗೆದುಕೊಳ್ಳುವಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದಲ್ಲಿ ವಾದ ಮಂಡಿಸಿದ್ದೇವೆ’ ಎಂದು ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 60

  Happy
 • 1

  Amused
 • 1

  Sad
 • 0

  Frustrated
 • 5

  Angry

Comments:

0 comments

Write the first review for this !