ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22,150 ಅತಿಥಿ ಶಿಕ್ಷಕರ ನೇಮಕ

Last Updated 7 ಜುಲೈ 2019, 19:40 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದಾಗಿ ಪಾಠ ಪ್ರವಚನಕ್ಕೆ ತೊಂದರೆಯಾಗಿರುವುದನ್ನು ಮನಗಂಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲ್ಲೂಕು ಮಟ್ಟದಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳುವುದಕ್ಕೆ ಅನುಮತಿ ನೀಡಿದೆ. ಈ ರೀತಿ 22,150 ಶಿಕ್ಷಕರ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಅತಿಥಿ ಶಿಕ್ಷಕರ ಪೈಕಿ 11,585 ಶಿಕ್ಷಕರನ್ನು ಈ ವರ್ಷ ಪೂರ್ತಿ ಕೆಲಸ ಮಾಡಿಸುವ ಭರವಸೆಯೊಂದಿಗೆ ಪೂರ್ಣಾವಧಿಗೆ ಸೇರಿಸಿಕೊಳ್ಳಲಾಗಿದ್ದರೆ, ಉಳಿದವರನ್ನು ಕಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕೊನೆಗೊಳ್ಳುವ ತನಕ ಎಂದು ಹೇಳಿ ಸೇರಿಸಿಕೊಳ್ಳಲಾಗಿದೆ.

‘10,565 ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಆ ನೇಮಕಾತಿ ಆಗುವ ತನಕ ಅತಿಥಿ ಶಿಕ್ಷಕರು ಕರ್ತವ್ಯ ನಿರ್ವಹಿಸಬೇಕು’ ಎಂದು ಇಲಾಖೆ ಹೊರಡಿಸಿರುವ ಅಧಿಕೃತ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಯಾದಗಿರಿ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದಲ್ಲಿ ಶಿಕ್ಷಕರ ಹುದ್ದೆ ಖಾಲಿ ಇದೆ. ಜಿಲ್ಲೆಯಲ್ಲಿ 1,835 ಹುದ್ದೆಗಳು ಖಾಲಿ ಇದ್ದರೆ, ಬೆಳಗಾವಿಯಲ್ಲಿ 1,796 ಹುದ್ದೆಗಳು, ಚಿಕ್ಕೋಡಿಯಲ್ಲಿ 1,793 ಹುದ್ದೆಗಳು ಖಾಲಿ ಇವೆ. ಅತಿ ಕಡಿಮೆ ಎಂದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 95 ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 134 ಹುದ್ದೆಗಳಷ್ಟೇ ಖಾಲಿ ಇವೆ.

ಅತಿಥಿ ಶಿಕ್ಷಕರಿಗೆ ಮಾಸಿಕ ₹ 7,500ರಂತೆ 10 ತಿಂಗಳು (ಜೂನ್‌–ಮಾರ್ಚ್‌) ಗೌರವಧನ ನೀಡಲಾಗುತ್ತದೆ.

‘ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಅನುಪಾತದಂತೆ ಶಿಕ್ಷಕರ ನಿಯೋಜನೆಗೆ ಕ್ರಮ ಕೈಗೊಳ್ಳಬೇಕು. ಶಿಕ್ಷಕರ ತೀವ್ರ ಕೊರತೆ ಇರುವ ಜಿಲ್ಲೆಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸುವ ಬದಲಿಗೆ ಅಧಿಕ ಶಿಕ್ಷಕರಿರುವ ಜಿಲ್ಲೆಗಳಿಂದ ಶಿಕ್ಷಕರನ್ನು ನಿಯೋಜಿಸಲು ಕ್ರಮ ಕೈಗೊಳ್ಳಬೇಕು’ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಅನುದಾನಿತ ಶಾಲೆಗಳಲ್ಲಿ ಹೆಚ್ಚುವರಿ ಇರುವ ಶಿಕ್ಷಕರನ್ನು ಶಿಕ್ಷಕರ ಕೊರತೆ ಎದುರಿಸುತ್ತಿರುವ ಸರ್ಕಾರಿ ಶಾಲೆಗಳಿಗೆ ನಿಯೋಜಿಸಿ ಅವರದು ವಿಶೇಷ ಕರ್ತವ್ಯ ಎಂದು ಪರಿಗಣಿಸಬೇಕು ಎಂದು ಸರ್ಕಾರ ಸಲಹೆ ನೀಡಿದೆ.

ಅಂಕಿ ಅಂಶ

* 2,20,066ಸರ್ಕಾರಿ ಶಾಲೆಗಳಲ್ಲಿರುವಶಿಕ್ಷಕರ ಹುದ್ದೆ

*51,780 ಅನುದಾನಿತ ಶಾಲೆಗಳಲ್ಲಿನ ಶಿಕ್ಷಕರ ಹುದ್ದೆ

*50,066ರಾಜ್ಯದಲ್ಲಿರುವ ಒಟ್ಟು ಸರ್ಕಾರಿ ಶಾಲೆಗಳು

* 7,330 ಒಟ್ಟು ಅನುದಾನಿತ ಶಾಲೆಗಳು

*50 ಲಕ್ಷ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT