ಬುಧವಾರ, ಜನವರಿ 22, 2020
19 °C
ಚಾರುಕೀರ್ತಿ ಸ್ವಾಮೀಜಿ ದೀಕ್ಷೆಗೆ ಸುವರ್ಣ ಮಹೋತ್ಸವ

‘ಅಹಿಂಸೆಯಿಂದ ಎಲ್ಲರ ರಕ್ಷಣೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರವಣಬೆಳಗೊಳ: ‘ದೇವಸ್ಥಾನಗಳಲ್ಲಿ ಭಕ್ತಿ, ಪೂಜೆ ಅಭಿಷೇಕದ ಜೊತೆಗೆ ಪರೋಪಕಾರ ಮಾಡುವುದೇ ಧರ್ಮ’ ಎಂದು ಶ್ರವಣಬೆಳಗೊಳ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

‘ಅಹಿಂಸೆಯಲ್ಲಿ ಎಲ್ಲರ ರಕ್ಷಣೆ ಇದೆ. ಜೀವನ ಸುಖಮಯವಾಗಬೇಕಾದರೆ ಅಹಿಂಸೆ ಮೂಲಕ ಧರ್ಮ ಆಚರಿಸಬೇಕು. ಸಮಾಜದ ಉದ್ಧಾರವೇ ಮಠಗಳ ಗುರಿಯಾಗಬೇಕು’ ಎಂದು ಭಾನುವಾರ ಆಯೋಜಿಸಿದ್ದ ದೀಕ್ಷಾ ಸುವರ್ಣ ಮಹೋತ್ಸವ ಗುರುವಂದನೆ ಕಾರ್ಯಕ್ರಮದಲ್ಲಿ ತಿಳಿಸಿದರು.

‘ಈ 50 ವರ್ಷಗಳು 50 ದಿನಗಳಂತೆ ಕಳೆದಿವೆ. ಈ ಅವಧಿಯಲ್ಲಿ ಭಕ್ತರು ನೀಡಿದ ಕಾಣಿಕೆಗಳನ್ನು, ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ ಭಕ್ತರ ಏಳಿಗೆಗಾಗಿಯೇ ಬಳಸಲಾಗಿದೆ’ ಎಂದರು.

‘ನಾವು ಯಾವುದೇ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡಿದ್ದರೂ ರಾಜ್ಯ, ಕೇಂದ್ರ ಸರ್ಕಾರಗಳು ಎಲ್ಲ ರೀತಿಯಲ್ಲೂ ಸಹಕರಿಸಿವೆ’ ಎಂದು ಸ್ಮರಿಸಿಕೊಂಡರು.

ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ, ಧರ್ಮಸ್ಥಳದ ಡಿ.ಸುರೇಂದ್ರ ಹೆಗ್ಗಡೆ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌, ಶಾಸಕ ಸಂಜಯ್‌ ಪಾಟೀಲ್‌ ಗುರುವಂದನೆ ಸಲ್ಲಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು