ಚಿತ್ರದುರ್ಗದಲ್ಲಿ ಲಾರಿ-ಕಾರು ಡಿಕ್ಕಿ: ಮೂವರ ಸಾವು

7

ಚಿತ್ರದುರ್ಗದಲ್ಲಿ ಲಾರಿ-ಕಾರು ಡಿಕ್ಕಿ: ಮೂವರ ಸಾವು

Published:
Updated:

ಚಿತ್ರದುರ್ಗ: ತಾಲ್ಲೂಕಿನ ಮಾಡನಾಯಕನಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಕೋಮರನಘಟ್ಟ ಗ್ರಾಮದ ಮಂದಾರ (19), ರುಕ್ಮಿಣಿ (20) ಹಾಗೂ ನೆವಿಲ್ (26) ಮೃತಪಟ್ಟವರು. ಗಾಯಗೊಂಡಿರುವ ಮಹೇಂದ್ರ ಹಾಗೂ ಮನೋಹರ ಎಂಬುವರನ್ನು ಜಿಲ್ಲಾ ಅಸ್ಪತ್ರೆಗೆ ದಾಖಲಿಸಲಾಗಿದೆ.

ಸಂಬಂಧಿಕರ ಮದುವೆ ಮುಗಿಸಿ ಭಾನುವಾರ ರಾತ್ರಿ ಬೆಂಗಳೂರಿಗೆ ಮರಳುತ್ತಿದ್ದರು. ಹೊಸಪೇಟೆ ಕಡೆಯಿಂದ ಬರುತ್ತಿದ್ದ ಕಾರು ಹಾಗೂ ಚಿತ್ರದುರ್ಗ ಕಡೆಯಿಂದ ಹೊರಟಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ತುರುವನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 1

    Angry

Comments:

0 comments

Write the first review for this !