ನೇತ್ರಾವತಿ ನದಿಯಲ್ಲಿ ಮುಳುಗಿ ಮೂವರು‌ ವಿದ್ಯಾರ್ಥಿಗಳ ಸಾವು

7

ನೇತ್ರಾವತಿ ನದಿಯಲ್ಲಿ ಮುಳುಗಿ ಮೂವರು‌ ವಿದ್ಯಾರ್ಥಿಗಳ ಸಾವು

Published:
Updated:

ಮಂಗಳೂರು: ನೇತ್ರಾವತಿ ನದಿಯಲ್ಲಿ ಮುಳುಗಿ ಉಪ್ಪಿನಂಗಡಿ ಪದವಿಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 

ಮುಹಮ್ಮದ್ ಸುಹೈದ್, ಸಹೀರ್, ಫಿರ್ಝಾನ್ ಮೃತಪಟ್ಟ ವಿದ್ಯಾರ್ಥಿಗಳು. ಸೋಮವಾರ ರಾತ್ರಿ‌ ಪಿರ್ಝಾನ್ ನ ಜನ್ಮದಿನವನ್ನು ಆಚರಿಸಲು ಮೂವರು ನೇತ್ರಾವತಿ ನದಿ ತೀರಕ್ಕೆ ತೆರಳಿದ್ದರು. ಕೇಕ್ ಕತ್ತರಿಸಿ, ಕೈತೊಳೆಯುವ ಸಂದರ್ಭದಲ್ಲಿ  ನೀರು ಪಾಲಾಗಿದ್ದಾರೆ.

ರಾತ್ರಿ ಮನೆಗೆ ಬರದೇ ಇದ್ದುದರಿಂದ ಮಂಗಳವಾರ ಬೆಳಿಗ್ಗೆ ಪಾಲಕರು ಹುಡುಕಾಟ ನಡೆಸಿದ್ದಾರೆ. ಆದರೆ, ಬೆಳಿಗ್ಗೆ ನದಿಯಲ್ಲಿ ಶವ‌ ಪತ್ತೆಯಾಗಿವೆ. ಮೂವರೂ ಉಪ್ಪಿನಂಗಡಿ ಜೂನಿಯರ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ.ಕಲಿಯುತ್ತಿದ್ದರು.

ಬರಹ ಇಷ್ಟವಾಯಿತೆ?

 • 3

  Happy
 • 3

  Amused
 • 10

  Sad
 • 1

  Frustrated
 • 2

  Angry

Comments:

0 comments

Write the first review for this !