ಬದುಕಿಗೆ ಸಂಚಕಾರ ತಂದ ‘ಟಿಕ್-ಟಾಕ್’ ಕ್ರೇಜ್‌

ಶನಿವಾರ, ಜೂಲೈ 20, 2019
25 °C

ಬದುಕಿಗೆ ಸಂಚಕಾರ ತಂದ ‘ಟಿಕ್-ಟಾಕ್’ ಕ್ರೇಜ್‌

Published:
Updated:

ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೆಕೆರೆ ಗ್ರಾಮದ ಯುವಕ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲು ಟಿಕ್- ಟಾಕ್ ಮಾಡಲು ಹೋಗಿ ಬದುಕಿಗೆ ಸಂಚಕಾರ ತಂದುಕೊಂಡಿದ್ದಾರೆ.

ಕುಮಾರ್ ಆರ್ಕೆಸ್ಟ್ರಾಗಳಲ್ಲಿ ನೃತ್ಯಪಟುವಾಗಿದ್ದಾರೆ. ಕೆಲವು ಶಾಲಾ ಮಕ್ಕಳಿಗೆ ನೃತ್ಯ ಕಲಿಸುತ್ತಾರೆ. ಶನಿವಾರ (ಜೂ.15) ಸಂಜೆ ಗ್ರಾಮದ ಶಾಲಾ ಮೈದಾನದಲ್ಲಿ ಟಿಕ್– ಟಾಕ್‌ಗಾಗಿ ವಿಡಿಯೊ ಮಾಡಲು ಸ್ನೇಹಿತರಿಗೆ ತಿಳಿಸಿದ್ದಾರೆ. ಹಿಮ್ಮುಖವಾಗಿ ನೆಗೆದು ಸಾಹಸ ಪ್ರದರ್ಶಿಸುವಾಗ ಆಯತಪ್ಪಿ ನೆಲಕ್ಕೆ ಬಿದ್ದಿದ್ದಾರೆ. ಬೆನ್ನುಹುರಿ (ಸ್ಪೈನಲ್ ಕಾರ್ಡ್) ಮುರಿದಿದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಹರಿದಾಡುತ್ತಿದೆ.

ಕುಮಾರ್, ತಂದೆ–ತಾಯಿಗೆ ಒಬ್ಬನೇ ಮಗನಾಗಿದ್ದಾರೆ. ಅವರ ತಂದೆ ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಆರ್ಕೆಸ್ಟ್ರಾದ ದುಡಿಮೆಯೇ ಕುಟುಂಬ ನಿರ್ವಹಣೆಗೆ ಮೂಲವಾಗಿದೆ. ಸದ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಚಿಕಿತ್ಸೆಗೆ ₹10 ಲಕ್ಷ ಖರ್ಚಾಗುತ್ತದೆ. ಅಧಿಕ ಹಣ ಖರ್ಚು ಮಾಡಿ ಶಸ್ತ್ರಚಿಕಿತ್ಸೆ ಮಾಡಿದರೆ ಕುತ್ತಿಗೆ ಸ್ಥಿರವಾಗಿ ನಿಲ್ಲುವಂತೆ ಮಾಡಬಹುದು. ಆದರೆ, ಓಡಾಡಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಅವನು ಈ ರೀತಿ ಸಾಹಸಗಳನ್ನು ಮಾಡಿದ್ದನ್ನು ನಾನು ಎಂದೂ ನೋಡಿರಲಿಲ್ಲ. ಇತ್ತೀಚೆಗೆ ನೃತ್ಯಶಾಲೆ ಆರಂಭಿಸುವುದಾಗಿ ನನ್ನ ಬಳಿ ಹೇಳಿದ್ದ’ ಎಂದು ಕುಮಾರ್ ಚಿಕ್ಕಮ್ಮ ನಾಗವೇಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !