ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಲ್ವಾಮ ದಾಳಿ ಬಗ್ಗೆ ಎಚ್‍ಡಿಕೆ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡ ಟೈಮ್ಸ್ ನೌ

Last Updated 20 ಫೆಬ್ರುವರಿ 2019, 10:21 IST
ಅಕ್ಷರ ಗಾತ್ರ

ಬೆಂಗಳೂರು: ಪುಲ್ವಾಮ ಆತ್ಮಾಹುತಿ ದಾಳಿ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿಕೆಯನ್ನು ಪ್ರಸಾರ ಮಾಡಿದ ಟೈಮ್ಸ್ ನೌ ವಾಹಿನಿ, ಪಾಕಿಸ್ತಾನವನ್ನು ಖಂಡಿಸಲು ನಿರಾಕರಿಸಿದ ಕರ್ನಾಟಕ ಮುಖ್ಯಮಂತ್ರಿ ಎಂದು ವರದಿ ಮಾಡಿದೆ.

ಕುಮಾರಸ್ವಾಮಿ ಹೇಳಿಕೆ ಪ್ರಸಾರವಾಗುತ್ತಿದ್ದಂತೆ 'Shocker from Cong ally and Karnataka CM','HDK blames India for ‘terrorism crisis','Karnataka CM refuses to condemn Pak'ಎಂಬ ಶೀರ್ಷಿಕೆಯನ್ನು ಟೈಮ್ಸ್ ನೌ ವಾಹಿನಿ ನೀಡಿತ್ತು.

ಟೈಮ್ಸ್ ನೌ ವಾಹಿನಿಪ್ರಕಾರ ಕುಮಾರಸ್ವಾಮಿ ಪಾಕಿಸ್ತಾನವನ್ನುಖಂಡಿಸಲು ನಿರಾಕರಿಸಿದ್ದಾರೆ.ಇದರ ಬದಲು ಅವರುದೇಶದಲ್ಲಿರುವ ಭಯೋತ್ಪಾದನೆ ಬಗ್ಗೆ ಮಾತನಾಡಿದ್ದಾರೆ.

ನೆಟಿಜನ್‍ಗಳ ಆಕ್ರೋಶ

ಟೈಮ್ಸ್ ನೌ ಸುದ್ದಿ ವಾಹಿನಿ ಕುಮಾರಸ್ವಾಮಿ ಬಗ್ಗೆ ಈ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ನೆಟಿಜನ್‍ಗಳು ಪ್ರಸ್ತುತ ವಾಹಿನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕುಮಾರಸ್ವಾಮಿ ಹೇಳಿದ್ದೇನು?
'ಪುಲ್ವಾಮ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದಾರೆ. ದಾಳಿಗೆ ಪ್ರತ್ಯುತ್ತರವನ್ನು ಕೊಟ್ಟರೂಈ ದುಃಖದಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ. ಇಂಥಾ ಘಟನೆಗಳು ಮರುಕಳಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಆ ರೀತಿಯ ಒಂದು ವಾತಾವರಣ ನಿರ್ಮಾಣ ಮಾಡಬೇಕಿದೆ. ಇದು ಸರ್ಕಾರದ ಜವಾಬ್ದಾರಿ.
ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸುವುದು ಒಂದು ಭಾಗ.ಅದರ ಜತೆಯಲ್ಲಿ ಇವತ್ತು ನಮ್ಮ ದೇಶದ ಒಳಗೆ ನಮ್ಮ ಗಡಿಯೊಳಗೆ ಇರತಕ್ಕಂಥ ಉಗ್ರರೇನಿದ್ದಾರೆ ಅವರನ್ನು ಮಟ್ಟ ಹಾಕಬೇಕು.ಅದು ಬಂದೂಕುಗಳ ಮುಖಾಂತರವಾದರೂ ಇರಲಿ, ವಿಶ್ವಾಸದ ಮುಖಾಂತರವಾದರೂ ಸರಿ,ಉಗ್ರ ಚಟುವಟಿಕೆಗಳನ್ನು ನಿಲ್ಲಿಸಬೇಕಿದೆ.ಈ ರೀತಿ ಮಾಡಿದಾಗ ಯೋಧರ ಕುಟುಂಬಗಳು ಅನಾಥರಾಗುವುದನ್ನು ತಪ್ಪಿಸಬಹುದು, ಇದು ಸರ್ಕಾರದ ಕರ್ತವ್ಯ'

ಟೈಮ್ಸ್ ನೌ ಅರ್ಥೈಸಿಕೊಂಡದ್ದು ಹೇಗೆ?

ಕುಮಾರಸ್ವಾಮಿ ಅವರ ಈ ಹೇಳಿಕೆಯನ್ನು ಅನುವಾದ ಮಾಡಿದ ಟೈಮ್ಸ್ ನೌ ವರದಿಗಾರರು, ಪಾಕಿಸ್ತಾನವನ್ನು ಖಂಡಿಸುವ ಬದಲು ಕುಮಾರಸ್ವಾಮಿ ಭಾರತದಲ್ಲಿರುವ ಉಗ್ರವಾದದ ಬಗ್ಗೆ ಆರೋಪ ಮಾಡಿದ್ದಾರೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

Dear @timesnow, it is highly condemnable to misquote me on a such serious issue. You have not only misquoted, but also misunderstood what I said. I did not blame India; I said that along with destroying the enemies we also need to make our country stronger. https://t.co/7ocCHgw9An

ತಮ್ಮ ಹೇಳಿಕೆಯನ್ನು ನೀವು ತಪ್ಪಾಗಿ ಉಲ್ಲೇಖಿಸಿದ್ದು ಮಾತ್ರವಲ್ಲದೆ ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ. ಇದು ಖಂಡನೀಯ ಎಂದು ಟೈಮ್ಸ್ ನೌ ವಾಹಿನಿಯ ಸುದ್ದಿ ಬಗ್ಗೆ ಕುಮಾರಸ್ವಾಮಿ ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT